Kitchen Recipe : ಸರಳವಾಗಿ ಮನೆಯಲ್ಲೇ ರುಚಿಕರವಾದ ವೆಜ್ ಬಿರಿಯಾನಿ ಮಾಡುವ ವಿಧಾನ. ಬೇಕಾಗುವ ಪದಾರ್ಥಗಳು, ಹಂತ ಹಂತವಾಗಿ ಮಾಡುವ ವಿಧಾನ ಮತ್ತು ಸುಲಭ ಟಿಪ್ಸ್..

Kitchen Recipe : ವೆಜ್ ಬಿರಿಯಾನಿ – ರುಚಿಕರ ಮತ್ತು ಸುಲಭ ರೆಸಿಪಿ
ವೆಜ್ ಬಿರಿಯಾನಿ ಮನೆಗಳಲ್ಲಿ ಹೆಚ್ಚು ಮಾಡಲಾಗುವ ಪಪ್ಯುಲರ್ ರೈಸ್ ರೆಸಿಪಿ. ತರಕಾರಿಗಳ ಸವಿರುಚಿ, ಮಸಾಲೆಗಳ ಪರಿಮಳ ಮತ್ತು ಅಕ್ಕಿಯ ಸುಗಂಧ — ಅವೆಲ್ಲ ಸೇರಿ ಒಂದು ಅದ್ಭುತ ಡಿಶ್ ಸಿದ್ಧವಾಗುತ್ತದೆ.
ಬೇಕಾಗುವ ಪದಾರ್ಥಗಳು (Ingredients)
- ಎಣ್ಣೆ – ಸ್ವಲ್ಪ
- ಕಾಳುಮೆಣಸು – ಸ್ವಲ್ಪ
- ಚಕ್ಕೆ, ಲವಂಗ – ಸ್ವಲ್ಪ
- ಈರುಳ್ಳಿ – 1
- ಬೆಳ್ಳುಳ್ಳಿ – ಸ್ವಲ್ಪ
- ಶುಂಠಿ – ಸ್ವಲ್ಪ
- ಕೊತ್ತಂಬರಿ – ಸ್ವಲ್ಪ
- ಪುದೀನಾ – ಸ್ವಲ್ಪ
- ಹಸಿಮೆಣಸಿನಕಾಯಿ – 4
- ಕ್ಯಾರೆಟ್ – 2 (ಸಣ್ಣತುಂಡು)
- ಬೀನ್ಸ್ – ಸ್ವಲ್ಪ (ಸಣ್ಣ ತುಂಡು)
- ಬಟಾಣಿ/ಅವರೆಕಾಳು – ಸ್ವಲ್ಪ
- ಅಕ್ಕಿ – 1 ಬಟ್ಟಲು
- ಪಲಾವ್ ಎಲೆ – ಸ್ವಲ್ಪ
- ಏಲಕ್ಕಿ – 2
- ಸೋಂಪು – ಸ್ವಲ್ಪ
- ಕಸೂರಿ ಮೇಥಿ – ಸ್ವಲ್ಪ
- ಜೀರಿಗೆ – ½ ಚಮಚ
- ತುಪ್ಪ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಅಚ್ಚಖಾರದ ಪುಡಿ – ¼ ಚಮಚ
- ಬಿರಿಯಾನಿ ಮಾಸಾಲಾ – 1 ಚಮಚ
- ಮೊಸರು – 3 ಚಮಚ
- ಅರಿಶಿಣ – ½ ಚಮಚ
ವೆಜ್ ಬಿರಿಯಾನಿ ಮಾಡುವ ವಿಧಾನ (Step-by-Step)
Step 1: ಮಸಾಲಾ ಪೇಸ್ಟ್ ತಯಾರಿ
ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ. ಕಾದ ನಂತರ ಕಾಳುಮೆಣಸು, ಚಕ್ಕೆ, ಲವಂಗ, ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿನಕಾಯಿಗಳನ್ನು ಹಾಕಿ ಕೆಂಪಗೆ ಹುರಿ.
ನಂತರ ಇದನ್ನು ಮಿಕ್ಸರ್ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
Step 2: ಕುಕ್ಕರ್ನಲ್ಲಿ ಬಿರಿಯಾನಿ ಬಾಸ್
ಕುಕ್ಕರ್ನಲ್ಲಿ ತುಪ್ಪ ಹಾಕಿ. ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಕಸೂರಿ ಮೇಥಿ ಹಾಗೂ ಜೀರಿಗೆ ಹಾಕಿ ಫ್ರೈ ಮಾಡಿ.
ನಂತರ ಉಳಿದ ಈರುಳ್ಳಿಯನ್ನು ಹಾಕಿ ಕೆಂಪಗಾಗುವವರೆಗೂ ಫ್ರೈ ಮಾಡಿ.
Step 3: ತರಕಾರಿಗಳು ಮತ್ತು ಮಸಾಲೆ
ಇದೀಗ ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ. ನಂತರ ಉಪ್ಪು, ಅಚ್ಚಖಾರದ ಪುಡಿ, ಬಿರಿಯಾನಿ ಮಸಾಲಾ, ಮೊಸರು ಮತ್ತು ಅರಿಶಿಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
Step 4: ಅಕ್ಕಿ ಮತ್ತು ನೀರು ಸೇರಿಸಿ
ಮಿಶ್ರಣ ಕುದಿಯುತ್ತಿದ್ದಂತೆ ತೊಳೆದ ಅಕ್ಕಿ ಹಾಗೂ ಅಳತೆಗೆ ತಕ್ಕಷ್ಟು ನೀರು ಸೇರಿಸಿ.
ಕುಕ್ಕರ್ನಲ್ಲಿ 1–2 ಕೂಗು ಬರಲಿ.




