Hassan : ಪುರದಮ್ಮ ದೇವಸ್ಥಾನದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಎಸಗಿರೋ ಪ್ರಕರಣ ಬೆಳಕಿಗೆ ಬಂದಿದೆ.

ದೇವಸ್ಥಾನ ಅಂದ್ರೆ ಭಕ್ತರನ್ನು ಕಾಪಾಡುವ ದೈವಿಕ ಜಾಗ, ದೇವಸ್ಥಾನಕ್ಕೆ ಬರುವವರು ಅಪಾರವಾದ ಭಕ್ತಿಯನ್ನು ಇಟ್ಟುಕೊಂಡು ಬರ್ತಾರೆ. ಆದ್ರೆ ಕೆಲವರು ದೇವಸ್ಥಾನ ಅಂತಾನೂ ನೋಡದೇ ಅಸಭ್ಯವಾಗಿ ವರ್ತನೆ ಮಾಡೋದು ಅಲ್ಲಲ್ಲಿ ನೋಡಿರುತ್ತೇವೆ.. ದೇವಸ್ಥಾನ ಅಂದ್ರೆ ಎಲ್ಲರಿಗೂ ಭಯ, ಭಕ್ತಿ ಎಲ್ಲವೂ ಇರುತ್ತೆ.
ಆದ್ರೆ ಕೆಲವರಿಗೆ ದೇವರ ಮೇಲೂ ಒಂದಿಷ್ಟು ಕೂಡ ಭಯ ಇಲ್ಲದೇ, ಅನಾಚಾರಗಳನ್ನು ಮಾಡುತ್ತಾರೆ. ಈಗ ಅಂತಹದ್ದೇ ಪ್ರಕರಣ Hassan ದ ಸಾಲಗಾಮಿ ರಸ್ತೆಯಲ್ಲಿರುವ ಪುರದಮ್ಮ ದೇವಸ್ಥಾನದಲ್ಲಿ ನಡೆದಿದ್ದು, ದೇವಸ್ಥಾನದಲ್ಲೂ ಮಹಿಳೆಯರಿಗೆ ಸುರಕ್ಷತೆನೇ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ.
ಮಹಿಳೆ ಮೇಲೆ ದೌರ್ಜನ್ಯ
ಹಾಸನ ಜಿಲ್ಲೆಯ ಸಾಲಗಾಮಿ ರಸ್ತೆಯಲ್ಲಿ ಪುರದಮ್ಮ ದೇವಸ್ಥಾನದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಎಸಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಪರದಮ್ಮ ದೇವಸ್ಥಾನ .ಒಂದು ಪುರಾತನವಾದ ದೇವಾಲಯವಾಗಿದ್ದು, ನಿತ್ಯ ನೂರಾರು ಮಂದಿ ಭಕ್ತರು ಈ ದೇವಸ್ಥಾನಕ್ಕೆ ಬರ್ತಾರೆ. ಆದ್ರೆ ಹಂದಿ ಮಾಂಸ ಮಾರಾಟ ಮಾಡುವ ಮಾರಾಟಗಾರ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಕೈ ಹಿಡಿದು ಎಳೆಯೋ ಮೂಲಕ ದೈಹಿಕ ದೌರ್ಜನ್ಯ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ಓದಿ : ಪಡಿತರ ಅಂಗಡಿಗಳನ್ನ ರಾತ್ರಿವರೆಗೂ ತೆರೆಯುವಂತೆ ಡಿಸಿ ಖಡಕ್ ಸೂಚನೆ!

ಹಂದಿ ಮಾಂಸ ಮಾರಾಟ ಮಾಡುವ ವ್ಯಕ್ತಿಯಿಂದ ದೌರ್ಜನ್ಯ..?!
ಹಾಸನ ಮೂಲದ ಸುನೀಲ್ ಎಂಬುವವರು ತನ್ನ ಹೆಂಡ್ತಿ, ಮಗು ಹಾಗೂ ತನ್ನ ತಾಯಿ ಜೊತೆ ನಿನ್ನೆ ಪುರದಮ್ಮ ದೇವಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಹಂದಿ ಮಾಂಸ ಮಾರಾಟ ಮಾಡುವ ಒಬ್ಬ, ಹಂದಿ ಮಾಂಸ ತೆಗೆದುಕೊಳ್ಳಿ ಎಂದು ಭಲವಂತ ಮಾಡಿದ್ದಾರೆ.
ಆದ್ರೆ ಬೇಡ ಅಂತಾ ಹೇಳಿದ್ದಕ್ಕೆ ಸುನೀಲ್ ಅವರ ಪತ್ನಿ ಸಿಂಚನಾ ಅವರನ್ನು ನಿನ್ನ ರೇಟ್ ಎಷ್ಟು ಅಂತಾ ಹೇಳಿ, ಸಿಂಚನಾ ಕೈಹಿಡಿದು ಎಳೆದಾಡಿದ್ದಾನೆ. ಇನ್ನು ಇದನ್ನು ಪ್ರಶ್ನೆ ಮಾಡಲು ಹೋಗಿದ್ದಕ್ಕೆ ಹಂದಿ ಮಾಂಸ ಮಾರಾಟ ಮಾಡುವವನು ಸುನೀಲ್ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಸುನೀಲ್ ಗಂಭೀರ ಆರೋಪ ಮಾಡಿದ್ದಾರೆ.
ಹಾಸನ ಪೊಲೀಸ್ ಠಾಣೆಗೆ ದೂರು
ಸದ್ಯ ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ಸುನೀಲ್ ಅವರ ಪತ್ನಿ ಸಿಂಚನಾ ದೂರು ನೀಡಿದ್ದು, ಆರೋಪಿ ಪವನ್ನನ್ನು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ದೇ ಇಂದು ಪೊಲೀಸರು ಇಂದು ಸ್ಥಳಮಹಜರು ಮಾಡಿ, ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನು ನೋಡಿ : TUMAKURU DC | ಪಿಎಂ-15 ಪ್ರಗತಿ ಪರಿಶೀಲನಾ ಸಭೆ – ಅಧಿಕಾರಿಗಳಿಗೆ ಡಿಸಿ ಖಡಕ್ ಸೂಚನೆ




