ಕೆಎಸ್ಸಿಎ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ – ಸ್ಟೇಡಿಯಂಗೆ ತೆರಳಿ ಡಿ.ಕೆ.ಶಿವಕುಮಾರ್ ಮತದಾನ.

ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಇನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮಂದಿ ಮತದಾನ ಮಾಡಿದ್ರು. ಡಿ.ಕೆ.ಶಿವಕುಮಾರ್ ಯಾರ ಪರ ಓಟ್ ಹಾಕಿದ್ರು ಅನ್ನೋದು ಕುತೂಹಲ ಮೂಡಿಸಿದೆ.
KSCA ಅಧ್ಯಕ್ಷರಾಗಿ ವೆಂಕಟೇಶ್
ಇನ್ನು ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣಕ್ಕೆ ಭರ್ಜರಿ ಜಯ ಸಿಕ್ಕಿದ್ದು, ಕೆಎನ್ ಶಾಂತಕುಮಾರ್ ಬಣಕ್ಕೆ ಸೋಲಾಗಿದೆ. 749 ಮತಗಳನ್ನು ಪಡೆದು ಗೆದ್ದಿರುವ ವೆಂಕಟೇಶ್ ಪ್ರಸಾದ್ KSCA ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿ : ಪುರದಮ್ಮ ದೇವಸ್ಥಾನದಲ್ಲಿ ಮಹಿಳೆಯರ ಮೇಲೆ ಇದೆಂಥಾ ದೌರ್ಜನ್ಯ..?

749 ಮತ ಪಡೆದು ಭರ್ಜರಿ ಜಯ
ಕೆಎಸ್ಸಿಎ ಎಲೆಕ್ಷನ್ನಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಜಯ ಸಾಧಿಸಿದೆ. ಈ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಕೆಎಸ್ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವೆಂಕಟೇಶ್ ಪ್ರಸಾದ್ 749 ಮತ ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ. ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಇನ್ನು ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಕೆಎನ್ ಶಾಂತಕುಮಾರ್ಗೆ ಸೋಲಾಗಿದೆ. ಶಾಂತಕುಮಾರ್ 558 ಮತಗಳನ್ನು ಪಡೆದಿದ್ದು, ವೆಂಕಟೇಶ್ ಪ್ರಸಾದ್ ಎದುರು ಸೋಲನ್ನಪ್ಪಿದ್ದಾರೆ.
ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆ
ಇನ್ನು 719 ಮತ ಪಡೆದ ಸುಜಿತ್ ಸೋಮಸುಂದರ್ ಕೆಎಸ್ಸಿಎ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 669 ಮತ ಪಡೆದು ಜಯಗಳಿಸಿದ ಬಿಕೆ ರವಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. 736 ಮತ ಪಡೆದು ಜಯಗಳಿಸಿದ ಬಿಎನ್ ಮಧುಕರ್, ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ಯಾರಿಗೆ ಮತದಾನ ಮಾಡಿದ್ರು ಅನ್ನೋದು ಇನ್ನೂ ಕುತೂಹಲಕಾರಿಯಾಗಿಯೇ ಇದೆ.
ಇದನ್ನು ನೋಡಿ : TUMAKURU DC | ಪಿಎಂ-15 ಪ್ರಗತಿ ಪರಿಶೀಲನಾ ಸಭೆ – ಅಧಿಕಾರಿಗಳಿಗೆ ಡಿಸಿ ಖಡಕ್ ಸೂಚನೆ





