Political News : ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿಧಾನಸಭೆಯ ಪ್ರತಿಪಕ್ಷದ ನಾಯಕರಾರ ಅಶೋಕ್, ಸುನೀಲ್ ಕುಮಾರ್ ಮುಖಾಮುಖಿಯಾದರು.

Political News : ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್ (UT Khader) ಅವರನ್ನುಅಶೋಕ್, ಸುನೀಲ್ ಕುಮಾರ್ ಭೇಟಿಯಾದರು. ಈ ವೇಳೆ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು.
ಈ ವೇಳೆ ಸಿಎಂ, ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ಕಿಚಾಯಿಸಿದರು. ಇದಕ್ಕೆ ಇಬ್ಬರು ನಾಯಕರು ಯಾವುದೇ ಉತ್ತರ ನೀಡದೇ ನಕ್ಕಿದರು.
MUST READ : Chikkamagaluru News : ದತ್ತ ಜಯಂತಿ ಬ್ಯಾನರ್ ಗಲಾಟೆ; ಕಾಂಗ್ರೆಸ್ ಕಾರ್ಯಕರ್ತನ ಕೊಲೆ
ಈ ವೇಳೆ ಅಶೋಕ್ (Ashok) ಅವರಿಗೆ ಸಿಎಂ, ಏನ್ ಸಣ್ಣ ಆಗಿದ್ದೀಯಾ ಅಶೋಕ್ ಎಂದು ಕೇಳಿದರು. ಇದಕ್ಕೆ ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್. ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದರು.
ಈ ಉತ್ತರಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದರು. ಇದಕ್ಕೆ ಅಶೋಕ್ ನಕ್ಕು ಮುಂದೆ ಸಾಗಿದರು.
ಇದನ್ನು ನೋಡಿ : ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ ರೈತನ ರಾಗಿ ಹೊಲದಲ್ಲಿ ಕಾಣಿಕೆ ಹುಂಡಿ ಪತ್ತೆ




