ಫೈನಾನ್ಸ್ನ 3 ಲಕ್ಷಕ್ಕೂ ಅಧಿಕ ಹಣ ಆನ್ಲೈನ್ ಗೇಮ್ಗೆ ಬಳಕೆ – ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆಗೆ ಶರಣು.

ಫೈನಾನ್ಸ್ಗೆ ಕಟ್ಟಬೇಕಿದ್ದ 3 ಲಕ್ಷ ರೂ.ಗೂ ಅಧಿಕ ಹಣವನ್ನು Online Game ಗೆ ಬಳಕೆ ಮಾಡಿ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.
Online Game ಗೆ ಫೈನಾನ್ಸ್ ಹಣ ಖರ್ಚು
ಮಂಗಳಗಟ್ಟಿ ಗ್ರಾಮದ ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಊರಿನಲ್ಲೇ ಫೈನಾನ್ಸ್ ಸಂಸ್ಥೆಯ ಹಣವನ್ನು Collection ಮಾಡುವ ಕೆಲಸ ಮಾಡುತ್ತಿದ್ದ ಬಸವರಾಜ, ಸಂಗ್ರಹಿಸಿದ್ದ ಹಣವನ್ನೇ ಆನ್ಲೈನ್ ಗೇಮ್ ಆಡಲು ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಮಟನ್ ಗಿಂತಲೂ ಜಾಸ್ತಿ ಆಯ್ತು ನುಗ್ಗೆಕಾಯಿ ಬೆಲೆ!
ದುಡ್ಡು ವಾಪಸ್ ಕಟ್ಟಲಾಗದೇ ಆತ್ಮಹತ್ಯೆಗೆ
ಗೇಮ್ ಚಟಕ್ಕೆ ಬಿದ್ದು ₹3 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡ ಬಸವರಾಜ ಬಳಿಕ, ಫೈನಾನ್ಸ್ಗೆ ವಾಪಸ್ ಕಟ್ಟಲು ಸಾಧ್ಯವಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಇದರಿಂದ ಮನನೊಂದು ಯುವಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ನುಗ್ಗೆಕಾಯಿ ಪ್ರಿಯರೇ ಈ ಸುದ್ದಿ ನೋಡಿ! – ಮಟನ್ ಗಿಂತಲೂ ಜಾಸ್ತಿ ಆಯ್ತು ನುಗ್ಗೆ ಬೆಲೆ | TUMAKURU NEWS




