ಮಟನ್ಗಿಂತ ದುಬಾರಿಯಾಯ್ತು ನುಗ್ಗೆಕಾಯಿ – ರೇಟ್ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಕಬ್ಬಿಣಾಂಶ ಮತ್ತು ಪೌಷ್ಟಿಕಾಂಶ ಹೆಚ್ಚಿರುವ Drumstick Price ಈಗ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಬೇಸತ್ತ ತುಮಕೂರಿನ ಮಂದಿ ಈ ಬಾರಿ ನುಗ್ಗೆ ನೋಡಿ ಉಬ್ಬೇರಿಸುತ್ತಿದ್ದಾರೆ. ಮಟನ್ ಗಿಂತಲೂ Costly ಆಗಿರುವ ನುಗ್ಗೆ ಬೆಲೆ ಎಷ್ಟು ಗೊತ್ತಾ..? ಜನರು ನುಗ್ಗಿಕಾಯಿ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿರುವುದೇಕೆ ಇಲ್ಲಿದೆ ನೋಡಿ ಆ ಕುರಿತು Details.
ಗಗನಕ್ಕೇರಿತು ನುಗ್ಗೆಕಾಯಿ ಬೆಲೆ
ಕಾಯಿ ಕಾಯಿ ನುಗ್ಗೆಕಾಯಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದ್ರೆ ಬೆಲೆ ಕೇಳಿದರೆ ಒಂದು ಕ್ಷಣ ಶಾಕ್ ಆಗೋದು ಪಕ್ಕ. ಜನಸಾಮಾನ್ಯರು ನುಗ್ಗೆಕಾಯಿ ಖರೀದಿ ಮಾಡೋದೇ ಕಷ್ಟವಾಗಿದೆ. ನುಗ್ಗೆಕಾಯನ್ನ ಹೇಗಪ್ಪಾ ಖರೀದಿ ಮಾಡೋದು ಎಂಬ Tension ಮಾಡಿಕೊಂಡಿದ್ದಾರೆ ಜನರು.

ಮಟನ್ ಗಿಂತಲೂ ದುಬಾರಿ ಆಯ್ತು Drumstick Price..!?
ಈ ಹಿಂದೆ KG ಗೆ ನುಗ್ಗೆಕಾಯಿ 100-150 ಇರತಿತ್ತು. ಈಗ ನುಗ್ಗೆಕಾಯಿ ಬೆಲೆ 500-600 ರೂ ಆಗಿದೆ. ತುಮಕೂರಿನಲ್ಲಿ ಹಿಂದೆ ಸಾಕಷ್ಟು ನುಗ್ಗೆಕಾಯಿ ಮಾರಾಟವಾಗ್ತಿತ್ತು. ಆದರೆ, ವಾತಾವರಣ ವ್ಯತ್ಯಾಸದಿಂದ ಸರಿಯಾಗಿ Supply ಆಗ್ತಿಲ್ವಂತೆ. ಹಾಗಾಗಿ ತುಮಕೂರು ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಬೆಲೆ ಗಗನಕೇರಿದೆ. ಖರೀದಿ ಕೂಡ ಕೊಂಚ ಇಳಿದಿದೆ ಅಂತಾರೆ ವ್ಯಾಪಾರಸ್ಥರು.
ಇದನ್ನು ಓದಿ : ಇಂಡಿಗೋ ಸಮಸ್ಯೆಯಿಂದ ಪರದಾಡ್ತಿದ್ದ ಪ್ರಯಾಣಿಕರಿಗೆ Good News!

ನುಗ್ಗೆಕಾಯಿ ಖರೀದಿಸಲು ಯಾರು ಮುಂದಾಗ್ತಿಲ್ಲ..?
ಒಟ್ಟಾರೆ ನುಗ್ಗೆಕಾಯಿ ಬೆಲೆ ಏರಿಕೆ ಆಗಿರುವುದರಿಂದ ತುಮಕೂರಿನ ಸಾರ್ವಜನಿಕರು ನುಗ್ಗೆಕಾಯಿ ಖರೀದಿ ಮಾಡಲು ಮುಂದಾಗ್ತಾಯಿಲ್ಲ. ಮದುವೆ ಮುಂಜಿ ಅಂತ ಕೆಲವರು ಮಾತ್ರ ಬಾಯಿ ಮೇಲೆ ಬೆರಳಿಟ್ಟುಕೊಂಡು ಖರೀದಿ ಮಾಡಲೇಬೇಕಲ್ಲಪ್ಪ ಎಂದು ಖರೀದಿಸುತ್ತಿದ್ದಾರೆ.

ಇದನ್ನು ನೋಡಿ : ಮಂತ್ರಿ ಆಗಿದ್ರೆ ಸಾಲಮನ್ನಾ ಮಾಡಿಸ್ತಿದ್ದೇ – ಆದ್ರೆ ಅಧಿಕಾರ ಹೋಯ್ತು ಅಂತಾ ಬೇಸರ




