Accident : ತಮಿಳುನಾಡಿನಲ್ಲಿ ಭೀಕರ ಅಪಘಾತ – ಐವರು ಅಯ್ಯಪ್ಪ ಭಕ್ತರ ದುರ್ಮರಣ.

Accident : ತಮಿಳುನಾಡಿನ ರಾಮೇಶ್ವರಂ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಮನಾಥಪುರಂ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಅಯ್ಯಪ್ಪ ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ವಂಗರ ರಾಮಕೃಷ್ಣ (51), ಮಾರ್ಪಿನ ಅಪ್ಪಲನಾಯ್ಡು (33), ರಾಮು (50), ಮರುಪಲ್ಲಿಯ ಬಂಡಾರು ಚಂದ್ರರಾವ್ (35) ಎಂದು ಗುರುತಿಸಲಾಗಿದೆ. ಮೃತರು ವಿಜಯನಗರ ಮತ್ತು ವಿಶಾಖಪಟ್ಟಣಂ ಜಿಲ್ಲೆಯವರಾಗಿದ್ದರು.
ಇದನ್ನು ಓದಿ : ನಟ Yash ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್..!
ಏಳು ಮಂದಿ ಗಂಭೀರ ಗಾಯ
ಈ ಅಪಘಾತ ಇಂದು ಬೆಳಗ್ಗಿನ ಜಾವ 2:15ಕ್ಕೆ ಸಂಭವಿಸಿದೆ. ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತರು ವಿಜಯನಗರ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಅಯ್ಯಪ್ಪ ಭಕ್ತರಾಗಿದ್ದಾರೆ.
ಚಂದ್ರಬಾಬು ನಾಯ್ಡು ತೀವ್ರ ಸಂತಾಪ
ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು ರಾಮೇಶ್ವರಂ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆ ಅಪಘಾತದ ಬಗ್ಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತೀವ್ರ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಗೃಹ ಸಚಿವೆ ಅನಿತಾ ಅಧಿಕಾರಿಗಳನ್ನ ವಿಚಾರಿಸಿ ಮಾಹಿತಿ ಪಡೆದಿದ್ದಾರೆ.
ಇದನ್ನು ನೋಡಿ : ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ ರೈತನ ರಾಗಿ ಹೊಲದಲ್ಲಿ ಕಾಣಿಕೆ ಹುಂಡಿ ಪತ್ತೆ




