ಆದಾಯ ತೆರಿಗೆ ಪ್ರಕರಣದಲ್ಲಿ ನಟ Yash ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್…!

ನಟ ಯಶ್ಗೆ (Actor Yash) ಆದಾಯ ತೆರಿಗೆ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. 2013-14 ರಿಂದ 2018-19 ಅವಧಿಗೆ ಆದಾಯ ತೆರಿಗೆ ಇಲಾಖೆ ಯಶ್ಗೆ ನೀಡಿದ್ದ ನೋಟಿಸ್ಸನ್ನು ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ರದ್ದು ಮಾಡಿದೆ.
Yash ಗೆ ನೋಟಿಸ್
ಹೊಂಬಾಳೆ ಕನ್ಸ್ಟ್ರಕ್ಷನ್ಸ್ಗೆ (Hombale construction) ಸಂಬಂಧಿಸಿ ಐಟಿ ಇಲಾಖೆ ತನಿಖೆ ನಡೆಸಿತ್ತು. ತನಿಖೆಯಲ್ಲಿ Yash ವಾಸಿಸುತ್ತಿದ್ದ ಹೊಸಕೆರೆಹಳ್ಳಿ ಮನೆ ಹಾಗೂ ಬಾಡಿಗೆಗೆ ಪಡೆದ ತಾಜ್ ವೆಸ್ಟ್ ಎಂಡ್ ರೂಂ ಶೋಧನೆಗೆ ಒಳಗಾಗಿತ್ತು. ಇದಾದ ಬಳಿಕ, 2021ರಲ್ಲಿ ಐಟಿ ಇಲಾಖೆ 6 ವರ್ಷಗಳ ಕಾಲ ಸಂಬಂಧಪಟ್ಟ ಸೆಕ್ಷನ್ 153C ಅಡಿ Yash ಗೆ ನೋಟಿಸ್ ಜಾರಿಗೊಳಿಸಿತ್ತು.
ಇದನ್ನು ಓದಿ : IND vs SA ODI|ಭಾರತ–ಸೌತ್ ಆಫ್ರಿಕಾ ಮೂರನೇ ಏಕದಿನ ಪಂದ್ಯ..!

‘ಶೋಧನೆ ನಡೆಸದ ವ್ಯಕ್ತಿ’
ಡಿಸೆಂಬರ್ 12, 2019 ರ ನೋಟಿಸ್ ಪ್ರಶ್ನಿಸಿ, 2021ರಲ್ಲಿ ಯಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಮ್ಮ ಮನೆಯನ್ನು ಶೋಧಿಸಿದ ಬಳಿಕವೂ ‘ಶೋಧನೆ ನಡೆಸದ ವ್ಯಕ್ತಿ’ ಎಂದು ಪರಿಗಣಿಸಿ ಐಟಿ ಇಲಾಖೆ ನೋಟಿಸ್ ನೀಡಿದ್ದು ಏಕೆ ಅನ್ನೋದು ಯಶ್ ವಾದವಾಗಿತ್ತು.
IT ಇಲಾಖೆ ಜಾರಿಗೊಳಿಸಿದ್ದ ನೋಟಿಸ್ನ ರದ್ದು
ಇನ್ನು ‘ಹೊಂಬಾಳೆ ಕನ್ಸ್ಟ್ರಕ್ಷನ್ನ ವಿಜಯ್ ಕುಮಾರ್ ವಿರುದ್ಧ ಶೋದನೆ ವಾರಂಟ್ ಪಡೆಯಲಾಗಿತ್ತು. ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧಿಸಲಾಗಿದೆ. ಹೀಗಾಗಿ ಯಶ್ ಶೋಧನೆಗೊಳಗಾದ ವ್ಯಕ್ತಿಯಲ್ಲ’ ಎಂದು ಐಟಿ ವಾದ ಮಾಡಿದೆ. ವಾದ ಪ್ರತಿವಾದ ಗಮನಿಸಿದ ಕೋರ್ಟ್ ಯಶ್ಗೆ ಐಟಿ ಇಲಾಖೆ ಜಾರಿಗೊಳಿಸಿದ್ದ ನೋಟಿಸ್ನ ರದ್ದು ಮಾಡಿದೆ.

ಯಶ್ ಅವರು ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಎರಡೂ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ ಎನ್ನಲಾಗಿದೆ. ಮಾರ್ಚ್ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಇದನ್ನು ನೋಡಿ : ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದವರ ಮೇಲೆ ದಾಳಿ – 5.50 ಲಕ್ಷ ಬೆಲೆ ಬಾಳುವ ಅಕ್ಕಿ ವಶ




