Ind vs SA ODI: ಮೂರು ಮ್ಯಾಚ್ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ದ್ವಿತೀಯ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದೆ. ಇದೀಗ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಅದರಂತೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ.

Ind vs SA ODI: ಭಾರತದ ವಿರುದ್ಧ ವಿಶಾಖಪಟ್ಟಣದಲ್ಲಿ ಇಂದು (ಡಿ. 6) ನಡೆಯುವ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೆ ಸೌತ್ ಆಫ್ರಿಕಾ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಪಂದ್ಯದಿಂದ ಟೋನಿ ಡಿ ಝೋರ್ಝಿ ಮತ್ತು ನಾಂಡ್ರೆ ಬರ್ಗರ್ ಇಬ್ಬರೂ ಗಾಯದ ಕಾರಣದಿಂದ ಅಲಭ್ಯಾರಗಿದ್ದಾರೆ.
ಮೂರನೇ ಏಕದಿನದಿಂದ ಟೋನಿ ಡಿ ಝೋರ್ಝಿ ಮತ್ತು ನಾಂಡ್ರೆ ಬರ್ಗ ಔಟ್!
- ಬರ್ಗರ್ ದ್ವಿತೀಯ ಪಂದ್ಯದಲ್ಲಿ ಬೌಲಿಂಗ್ ವೇಳೆ ಗಾಯಗೊಂಡಿದ್ದರು.
- ಡಿ ಝೋರ್ಝಿ ಬ್ಯಾಟಿಂಗ್ ಸಮಯದಲ್ಲಿ ಕಾಲು ನೋವು ಅನುಭವಿಸಿದ್ದು, ಇನ್ನೂ ಫಿಟ್ ಆಗಿಲ್ಲ.

ಮೂರು ಪಂದ್ಯಗಳ ಸರಣಿ ಈಗ 1–1
- ಮೊದಲ ಪಂದ್ಯವನ್ನು ಭಾರತ ಗೆದ್ದಿತು.
- ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಐತಿಹಾಸಿಕವಾಗಿ ಜಯಿಸಿತು.
ಅದರಿಂದ ಇಂದಿನ ಪಂದ್ಯವು ಮಾಡು ಅಥವಾ ಮಡಿ ಪಂದ್ಯವಾಗಿದ್ದು, ಗೆಲ್ಲುವ ತಂಡವು ಸರಣಿಯನ್ನು 2–1 ಅಂತರದಿಂದ ಗೆಲ್ಲಲಿದೆ.
ಇದನ್ನೂ ಓದಿ : IND vs SA: ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ರೋಮಾಂಚನಕಾರಿ ಗೆಲುವು
ಭಾರತ ತಂಡ
ಕೆಎಲ್ ರಾಹುಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ಸೌತ್ ಆಫ್ರಿಕಾ ತಂಡ
ಟೆಂಬಾ ಬವುಮಾ, ಒಟ್ನೀಲ್ ಬಾರ್ಟ್ಮ್ಯಾನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಝ್ಕೆ, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸೆನ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್ಗಿಡಿ, ರಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಯೆನ್,
ಟೋನಿ ಡಿ ಝೋರ್ಝಿ (ಅಲಭ್ಯ), ನಾಂಡ್ರೆ ಬರ್ಗರ್ (ಅಲಭ್ಯ).
MUST WATCH: ಕತ್ತು ಸೀಳಿ ಮಹಿಳೆಯ ಬರ್ಬರ ಹ* ಕೇಸ್ಗೆ BIG TWIST - ಆರೋಪಿ ಬಂಧನವೇ ರೋಚಕ




