Nelamangala Accident : ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಯುವಕ ಸಾವು.

ಬೆಂಗಳೂರು–ತುಮಕೂರು 48 ಹೆದ್ದಾರಿಯ ಮಾದನಾಯಕನಹಳ್ಳಿ (Madanayakanahalli) ಬಳಿ ಬಸ್ಗೆ ಬೈಕ್ ಡಿಕ್ಕಿಯಾದ ಪರಿಣಾಮ 21 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಇದನ್ನು ಓದಿ : ʻಗತವೈಭವʼದ ವೈಭವವನ್ನ ಮತ್ತಷ್ಟು ಹೆಚ್ಚಿಸಿದ ಸಿಂಪಲ್ ಸುನಿ
ಅಪಘಾತ ಹೇಗೆ ಸಂಭವ..?
ಮೃತ ಯುವಕನನ್ನು ಸುಮಂತ್ ಜೆ. ಗೌಡ (21) ಎಂದು ಗುರುತಿಸಲಾಗಿದೆ. ಈ ಯುವಕ ನಾಗಸಂದ್ರದ ವಿದ್ಯಾನಗರ ನಿವಾಸಿಯಾಗಿದ್ದನು. ಸ್ನೇಹಿತನನ್ನ ನೋಡಲು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಬಸ್ ನಿಲ್ಲಿಸಿದ ಪರಿಣಾಮ ಹಿಂದೆ ಬೈಕ್ನಲ್ಲಿ ಬರುತ್ತಿದ್ದ ಸುಮಂತ್ ಕಂಟ್ರೋಲ್ ಸಿಗದೇ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಸ್ಥಳದಲ್ಲೇ ಸುಮಂತ್ ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲು
ಇನ್ನು ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಇದನ್ನು ನೋಡಿ : ಗುಬ್ಬಿ ತಾಲೂಕಿಗೆ DC ದಿಢೀರ್ VISiT – ಅವ್ಯವಸ್ಥೆ ಕಂಡು ಶುಭ ಕಲ್ಯಾಣ್ ಫುಲ್ ಗರಂ




