Gatavaibhava : ʻಗತವೈಭವʼದ ವೈಭವವನ್ನ ಮತ್ತಷ್ಟು ಹೆಚ್ಚಿಸಿದ ʻಸಿಂಪಲ್ʼ ಸುನಿ. ಥಿಯೇಟರ್ನಲ್ಲಿದೆ ಈಗ ಹೊಸ ವರ್ಷನ್!

ನಿರ್ದೇಶಕ ಸಿಂಪಲ್ ಸುನಿ (Simple Suni) ಅವರ ‘ಗತವೈಭವ’ ಸಿನಿಮಾದ (Gatavaibhava Movie) ಮೂಲಕ ಸ್ಯಾಂಡಲ್ವುಡ್ಗೆ ಪರಿಚಯವಾದ ಹೊಸ ಪ್ರತಿಭೆ ದುಷ್ಯಂತ್ (Dushyanth) ಅವರು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ನವೆಂಬರ್ 14ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ವಾರದಲ್ಲೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೊದಲ ಸಿನಿಮಾವಾಗಿದ್ದರೂ ಪಳಗಿದ ನಟನಂತೆ ಕಾಣಿಸಿದ ದುಷ್ಯಂತ್ ಅವರ ಅಭಿನಯ ಎಲ್ಲರನ್ನು ಆಕರ್ಷಿಸಿತ್ತು.
ಗತವೈಭವ ಈಗ ಇನ್ನಷ್ಟು ಟ್ರಿಮ್!
ಹೌದು Gatavaibhava ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ ಕೂಡ ಅವಧಿ ಹೆಚ್ಚಾಯಿತೇನೋ ಎಂಬ ಮಾತುಗಳು ಕೇಳಿಬಂದಿದ್ದವು. ಆ ಬಗ್ಗೆ ಗಮನ ನೀಡಿರುವ ಸಿಂಪಲ್ ಸುನಿ ಅವರು ಅವಧಿಯನ್ನು ತಗ್ಗಿಸಿದ್ದಾರೆ. ಸಿನಿಮಾ ಅವಧಿಯನ್ನು ಹೆಚ್ಚಿಸುವಂತಹ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿರುವ ಸುನಿ, ಸಿನಿಮಾವನ್ನು ಇನ್ನಷ್ಟು ಚೆಂದಗಾಣಿಸಿದ್ದಾರೆ. ಈ ಮೊದಲು ಸಿನಿಮಾದ ಅವಧಿ 142 ನಿಮಿಗಳು ಇತ್ತು. ಇದೀಗ 125 ನಿಮಿಷಕ್ಕಿಂತ ಕಡಿಮೆ ಇದೆ.
ಇದನ್ನು ಓದಿ : ಅಜಾತಶತ್ರು SP Balasubrahmanyam ಪ್ರತಿಮೆಗೆ ವಿರೋಧ..!

ಸ್ಪೀಡ್ ಆದ ಸಿನಿಮಾದ ನಿರೂಪಣೆ
ಆರಂಭದಲ್ಲಿ ಬರುವ ದೇವಲೋಕದ ಎಪಿಸೋಡ್ನ ಅವಧಿ ಜಾಸ್ತಿ ಆಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಅದಕ್ಕೆ ಕತ್ತರಿ ಬಿದ್ದಿದೆ. ಅಲ್ಲಲ್ಲಿ, ಕೆಲವೊಂದಿಷ್ಟು ಸೀನ್ಗಳನ್ನು ಕೂಡ ಕತ್ತರಿಸಿ, ಇಡೀ ಸಿನಿಮಾವದ ನಿರೂಣೆಯನ್ನು ಈಗ ಮತ್ತಷ್ಟು ವೇಗಗೊಳಿಸಿದ್ದಾರೆ.
ದ್ವಿತಿಯಾರ್ಧದಲ್ಲಿ ಬರುವ ಕಥೆಯು ಇನ್ನಷ್ಟು ತೂಕ ಎನಿಸುವಂತಾಗಿದೆ. ಒಟ್ಟಾರೆ, ಈಗಾಗಲೇ ವೀಕ್ಷಣೆ ಮಾಡಿದವರಿಗೂ ಕೂಡ ಈ ಎಡಿಟೆಡ್ ವರ್ಷನ್ ಹೊಸ ಅನುಭವ ನೀಡುವುದಂತೂ ಸುಳ್ಳಲ್ಲ.
ಎಲ್ಲರ ಮೆಚ್ಚುಗೆ ಪಡೆದ ದುಷ್ಯಂತ್
ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ದುಷ್ಯಂತ್ಗೆ ಇದು ಮೊದಲ ಸಿನಿಮಾವಾದರೂ, ಅವರ ಅಭಿನಯ, ಧ್ವನಿ, ಡೈಲಾಗ್ ಪ್ರಸ್ತುತಿ, ಶುದ್ಧವಾದ ಭಾಷಾ ಉಚ್ಚಾರಣೆ ಎಲ್ಲವೂ ಗಮನಸೆಳೆಯುತ್ತಿದೆ.
ಇನ್ನು ನಟಿ ಅಶಿಕಾ ರಂಗನಾಥ್ ಕೂಡ ಆಧುನಿಕ ಹಾಗೂ ಮಂಗಳಾ ಎಂಬ ಎರಡು ಭಿನ್ನ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.

ಇದನ್ನು ನೋಡಿ : ಕತ್ತು ಸೀಳಿ ಮಹಿಳೆಯ ಬರ್ಬರ ಹ* ಕೇಸ್ಗೆ BIG TWIST - ಆರೋಪಿ ಬಂಧನವೇ ರೋಚಕ | GUBBI MUR*ER CASE




