SP Balasubrahmanyam : ಬಾಲಸುಬ್ರಹ್ಮಣ್ಯಂ ಅವರನ್ನು ಎಲ್ಲ ಭಾಷಿಕರೂ ಗೌರವಿಸುತ್ತಿದ್ದರು. ರಾಜ್ಯ, ಭಾಷೆಯ ಗಡಿಗಳನ್ನು ದಾಟಿ ಬಾಲಸುಬ್ರಹ್ಮಣ್ಯಂ ಅವರು ಪ್ರೀತಿ ಪಾತ್ರರಾಗಿದ್ದರು. ಅಜಾತ ಶತ್ರು ಎನಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂ ಆದರೆ, ಕೋವಿಡ್ ಅವರನ್ನು ಅಕಾಲಿಕವಾಗಿ ಬಲಿ ಪಡೆಯಿತು

SP Balasubrahmanyam : ಭಾರತ ಕಂಡ ಅತ್ಯುತ್ತಮ ಗಾಯಕರಲ್ಲಿ ಒಬ್ಬರು. ಸಾವಿರಾರು ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದ ಬಾಲಸುಬ್ರಹ್ಮಣ್ಯಂ ಅವರನ್ನು ಎಲ್ಲ ಭಾಷಿಕರೂ ಗೌರವಿಸುತ್ತಿದ್ದರು. ರಾಜ್ಯ, ಭಾಷೆಯ ಗಡಿಗಳನ್ನು ದಾಟಿ ಬಾಲಸುಬ್ರಹ್ಮಣ್ಯಂ ಅವರು ಪ್ರೀತಿ ಪಾತ್ರರಾಗಿದ್ದರು. ಅಜಾತ ಶತ್ರು ಎನಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂ ಆದರೆ, ಕೋವಿಡ್ ಅವರನ್ನು ಅಕಾಲಿಕವಾಗಿ ಬಲಿ ಪಡೆಯಿತು. ಅಭಿಮಾನಿಗಳು ಸೂಕ್ತ ವಿದಾಯವನ್ನು ಸಹ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಲಾಗಿರಲಿಲ್ಲ. ಅದೇ ಕಾರಣಕ್ಕೆ ಇತ್ತೀಚೆಗೆ ತೆಲಂಗಾಣ ಸರ್ಕಾರ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆಯೊಂದನ್ನು ಸ್ಥಾಪಿಸಿ ಗೌರವಿಸಿತು. ಆದರೆ ಅದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಹತ್ತಿರದ ಸಂಬಂಧಿ ಮತ್ತು ಖ್ಯಾತ ನಟ ಶುಭಲೇಖ ಸುಧಾಕರ್, ಪ್ರತಿಭಟನಾಕಾರರನ್ನು ಮನವೊಲ್ಲಿಸಲು ಯತ್ನಿಸಿದರು. ಅವರು ಬಾಲಸುಬ್ರಹ್ಮಣ್ಯಂ ಅವರ ತೆಲುಗು ಕಲೆ ಮತ್ತು ಭಾಷೆಗೆ ಮಾಡಿದ ಅಪಾರ ಕೊಡುಗೆಗಳನ್ನು ವಿವರಿಸಿದರು ,ಅವರ ಕಲೆಯ ಬೃಹತ್ ಪ್ರಭಾವವನ್ನು ತಿಳಿಸಲು ಪ್ರಯತ್ನಿಸಿದರು.
ಆದರೆ ಪೃಥ್ವಿರಾಜ್ ಯಾದವ್, “ನನಗೆ ಎಸ್ಪಿ ಬಿ ಯಾರೆಂಬುದು ಗೊತ್ತಿಲ್ಲ” ಎಂದು ವಾದವನ್ನೇ ತಿರಸ್ಕರಿಸಿದರು. ಕೊನೆಗೆ ಸುಧಾಕರ್ ಅವರು ಬೇಸರದಿಂದ ಸ್ಥಳತ್ಯಾಗ ಮಾಡಿದರು.
ನೆಟ್ಟಿಗರಿಂದ ಪೃಥ್ವಿರಾಜ್ ಯಾದವ್ ವಿರುದ್ಧ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ,ಜನರು ಪೃಥ್ವಿರಾಜ್ ಯಾದವ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು “ತೆಲುಗು ರಾಜ್ಯಗಳ ಹೆಮ್ಮೆಯ ಪುತ್ರ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಮಹಾನ್ ಕಲಾವಿದರ ಪ್ರತಿಮೆಗೂ ವಿರೋಧ ವ್ಯಕ್ತಪಡಿಸುವುದು ಅಸಮಂಜಸ ಎಂದು ಟೀಕಿಸಲಾಗಿದೆ
ಇದನ್ನು ನೋಡಿ : KN RAJANNA | ರಾಜಣ್ಣಗೆ BJP-JDS ನಿಂದ ಆಹ್ವಾನ ಯಾವ ಪಕ್ಷಕ್ಕೆ ರಾಜಣ್ಣ




