Deadly Murder : ಮೂವರು ಮಕ್ಕಳ ತಾಯಿಯ ಡೆಡ್ಲಿ ಮರ್ಡರ್ – ಪ್ರಾಣಕ್ಕೆ ಸಂಚು ತಂತಾ ಲವ್ವಿಡವ್ವಿ?

ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಸಂಧ್ಯಾ (32) ಮೃತ ಮಹಿಳೆಯಾಗಿದ್ದಾರೆ.
ಗಂಡನ ಬಿಟ್ಟು ತವರು ಸೇರಿದ್ದ ಸಂಧ್ಯಾ
ಮೃತ ಸಂಧ್ಯಾ ಮೂಲತಃ ಅರೇನೂರು ಗ್ರಾಮದವರು. 10 ವರ್ಷಗಳ ಹಿಂದೆ ಶಿರಗೋಳ ಗ್ರಾಮದ ರವಿ ಎಂಬುವವರೊಂದಿಗೆ ಸಂಧ್ಯಾ ಮದುವೆಯಾಗಿದ್ದಳು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮೂವರು ಮಕ್ಕಳಿದ್ದರು. ಆದರೆ ಇವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಗಂಡನ ಬಿಟ್ಟು ಬಂದಿದ್ದ ಸಂಧ್ಯಾ, ಕಳೆದ 3 ವರ್ಷಗಳಿಂದ ಅರೇನೂರು ಗ್ರಾಮದ ತಾಯಿ ಮನೆ ಸೇರಿದ್ದರು. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಇದನ್ನು ಓದಿ : ರಾಹುಲ್ ಡ್ರಾವಿಡ್ ದಾಖಲೆ ಮುರಿದ Rohit Sharma
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಂಧ್ಯಾ
ಈ ನಡುವೆ ಕಳೆದ ಕೆಲವು ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದರು. ಅವರ ತಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಆದರೆ ಸೋಮವಾರ ಸಂಜೆ ಅರೇನೂರು ಗ್ರಾಮದ ತಾಯಿ ಮನೆಗೆ ಸಂಧ್ಯಾ ವಾಪಸ್ ಬಂದಿದ್ದಾರೆ. ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮನೆಯವರಿಗೆ ತಿಳಿಸಿದ್ದಾರೆ.
ಪ್ರಾಣಕ್ಕೆ ಸಂಚು ತಂತಾ ಲವ್ವಿಡವ್ವಿ?
ಇನ್ನು ಸಂಧ್ಯಾ ಹತ್ಯೆಗೆ ಲವ್ ಕಹಾನಿ ಎಂಬ ಅನುಮಾನ ವ್ಯಕ್ತವಾಗಿದೆ. ಗಂಡನಿಂದ ದೂರವಿದ್ದ ಅವರು ಮತ್ತೊಂದು ಮದುವೆ ಬಗ್ಗೆ ಯೋಚಿಸುತ್ತಿದ್ದರು. ಆದರೆ ಈ ಪ್ರೇಮಕ್ಕೆ ಕುಟುಂಬದ ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡ ಸಂಧ್ಯಾ ಪ್ರೇಮಿ ಜೊತೆ ಹೋಗಿದ್ದರು. ಇತ್ತ ತಂದೆ ಮಗಳ ಮಿಸ್ಸಿಂಗ್ ಬಗ್ಗೆ ದೂರು ನೀಡಿದ್ದರಿಂದ, ಪೊಲೀಸರಿಗೆ ಇವರ ಸುಳಿವು ಸಿಕ್ಕ ಮಾಹಿತಿ ಬೆನ್ನಲ್ಲೇ ತಾಯಿ ಮನೆಗೆ ಸಂಧ್ಯಾ ಹಿಂದಿರುಗಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡ ಪ್ರೇಮಿ, ಸಂಧ್ಯಾ ಹತ್ಯೆಮಾಡಿದ್ನಾ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನು ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಹಂತಕನ ಬಂಧನಕ್ಕಾಗಿ ಎರಡು ತಂಡ ರಚಿಸಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನು ನೋಡಿ : ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವಸ್ಥೆ ಅಧಿಕಾರಿಗಳ ಕಚೇರಿಯೇ ಹೀಗಾದ್ರೆ ಹೇಗೆ | TUMAKURU NEWS




