Rohit Sharma Breaks Rahul Dravid Record : 14 ರನ್ ಬಾರಿಸಿ ದ್ರಾವಿಡ್ ದಾಖಲೆ ಮುರಿದ ರೋಹಿತ್ ಶರ್ಮಾ.

ದಕ್ಷಿಣ ಆಫ್ರಿಕಾ ವಿರುದ್ಧ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯ (IND vs SA 2nd ODI) ದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಕೇವಲ 14 ರನ್ ಗಳಿಸುವ ಮೂಲಕ ರೋಹಿತ್ ಭಾರತ ಭೂಮಿಯಲ್ಲಿ 9000 ಅಂತರರಾಷ್ಟ್ರೀಯ ರನ್ಗಳನ್ನು ಪೂರ್ಣಗೊಳಿಸಿದ್ದು, ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ.
ಎಲೈಟ್ ಪಟ್ಟಿಯಲ್ಲಿ ಸ್ಥಾನ
ಈ ಮೂಲಕ ರೋಹಿತ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಜೊತೆಗೆ ಭಾರತದಲ್ಲಿ ಮೂರು ಸ್ವರೂಪಗಳಲ್ಲಿ 9000+ ರನ್ ಗಳಿಸಿದ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಭಾರತದಲ್ಲಿ ಇದುವರೆಗೆ 208 ಇನ್ನಿಂಗ್ಸ್ಗಳಲ್ಲಿ 9005 ರನ್ಗಳು* ಬಾರಿಸಿದ್ದಾರೆ. ತೆಂಡೂಲ್ಕರ್ (14192) ಹಾಗೂ ಕೊಹ್ಲಿ (12373) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಇದನ್ನು ಓದಿ : ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವವಿವಾಹಿತ ಸಾವು!
ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳು
- ಸಚಿನ್ ತೆಂಡೂಲ್ಕರ್: 313 ಇನ್ನಿಂಗ್ಸ್ – 14192 ರನ್ಗಳು
- ವಿರಾಟ್ ಕೊಹ್ಲಿ: 254 ಇನ್ನಿಂಗ್ಸ್ – 12373 ರನ್ಗಳು
- ರೋಹಿತ್ ಶರ್ಮಾ: 208 ಇನ್ನಿಂಗ್ಸ್ – 9005* ರನ್ಗಳು
- ರಾಹುಲ್ ದ್ರಾವಿಡ್: 211 ಇನ್ನಿಂಗ್ಸ್ – 9004 ರನ್ಗಳು
- ವೀರೇಂದ್ರ ಸೆಹ್ವಾಗ್: 179 ಇನ್ನಿಂಗ್ಸ್ – 7796 ರನ್ಗಳು
ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದು ಉತ್ತಮ ರನ್ ಕಲೆಹಾಕುತ್ತಿದೆ. ಭಾರತ ಸೋತ ಸತತ 20 ನೇ ಟಾಸ್ ಆಗಿದ್ದು, 2023 ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆರಂಭವಾದ ಸೋಲಿನ ಸರಣಿಯಾಗಿದೆ.
ಇದನ್ನು ನೋಡಿ : GUBBI | ಮೈತ್ರಿ ಮುಖಂಡರಿಗೆ ಭಾರತಿ ವಾಸಣ್ಣ ಖಡಕ್ ವಾರ್ನಿಂಗ್..!




