45 Movie : ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಸಿನಿಮಾದ ಮೇಲೆ ಹೂಡಿಕೆಯಾಗಿರುವ ಬಜೆಟ್ ಎಷ್ಟು ಗೊತ್ತಾ? ಬಿಡುಗಡೆಗೆ ಶುರುವಾಯ್ತು ದಿನಗಣನೆ!

45 Movie : ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, (Shivarajkumar) ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ರಾಜ್ ಬಿ ಶೆಟ್ಟಿ (Raj B Sheety) ಅಭಿನಯದ ಮಲ್ಟಿಸ್ಟಾರರ್ ಸಿನಿಮಾ ‘45’ ರಿಲೀಸ್ಗೆ ಕ್ಷಣಗಣನೆ ಆರಂಭವಾಗಿದೆ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ನಿರ್ದೇಶನದ ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ವಿಶೇಷವಾಗಿ ಇದು ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಸಿನಿಮಾ.
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್
ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಸುಮಾರು 100 ಕೋಟಿ ರೂ. ಖರ್ಚಾಗಿದ್ದು, ರಮೇಶ್ ರೆಡ್ಡಿ ಅವರ ನಿರ್ಮಾಣದ ಚಿತ್ರಗಳಲ್ಲಿ ಇದು ಅತ್ಯಂತ ದುಬಾರಿ ಸಿನಿಮಾ ಎಂದು ಹೇಳಬಹುದು. 45 ಚಿತ್ರವು ಕನ್ನಡದ ಜೊತೆಗೆ ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಡಿಸೆಂಬರ್ 25ರಂದು ತೆರೆಗೆ ಬರಲಿದೆ.
ಇದನ್ನು ಓದಿ : KN Rajanna|ಅಧಿಕಾರ ಹಂಚಿಕೆ, ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ರಾಜಣ್ಣ ಸ್ಫೋಟಕ ಹೇಳಿಕೆ

'ಆಫ್ರೋ ಟಪಾಂಗ್'ಹಾಡು ಫುಲ್ ವೈರಲ್
ಚಿತ್ರವು ಫ್ಯಾಂಟಸಿ ಥ್ರಿಲ್ಲರ್ ಶೈಲಿಯಾಗಿದೆ ಮತ್ತು ವಿಎಫ್ಎಕ್ಸ್ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ ಚಿತ್ರದಲ್ಲಿನ ವಿಎಫ್ಎಕ್ಸ್ ಕೆಲಸವನ್ನು ವಿದೇಶಿ ಕಂಪನಿಯೊಂದು ನಿರ್ವಹಿಸುತ್ತಿದೆ. 'ಆಫ್ರೋ ಟಪಾಂಗ್' ಎಂಬ ಹಾಡು ಈಗಾಗಲೇ ವೈರಲ್ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.
ಯಾವಾಗ ಸಿನಿಮಾ ರಿಲೀಸ್..?
ಇನ್ನು ಈ ಚಿತ್ರದಲ್ಲಿ ಮುಖ್ಯ ಹೈಲೈಟ್ ಎಂದರೆ, ಶಿವರಾಜ್ಕುಮಾರ್ ಮತ್ತು ಉಪೇಂದ್ರ ಬಹಳ ದಿನಗಳ ನಂತರ ಮುಖಾಮುಖಿಯಾಗಿದ್ದಾರೆ. ಇಬ್ಬರೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದು, ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 45 ಸಿನಿಮಾ ತೆರೆಗೆ ಬರಲು ಇನ್ನೂ 22 ದಿನಗಳು ಬಾಕಿ ಇದ್ದು, ಎಲ್ಲರ ಗಮನ ಡಿಸೆಂಬರ್ 25ರ ಮೇಲಿದೆ.

ಇದನ್ನು ನೋಡಿ : APMC ಮಾರುಕಟ್ಟೆ ರಸ್ತೆಯಲ್ಲಿ ಗುಂಡಿಗಳು – ಜೀವ ಭಯದಲ್ಲಿ ಸವಾರರ ಪ್ರಯಾಣ




