KN Rajanna: ಸಿಎಂ ಮತ್ತು ಡಿಸಿಎಂ ನಡುವಿನ ಅಧಿಕಾರ ಹಂಚಿಕೆ ಚರ್ಚೆ ಹಾಗೂ ‘ಬ್ರೇಕ್ಫಾಸ್ಟ್ ಮೀಟಿಂಗ್’ಗಳ ಬಗ್ಗೆ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

KN Rajanna: ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಚರ್ಚೆ ಮತ್ತು ಬ್ರೇಕ್ಫಾಸ್ಟ್ ಮೀಟಿಂಗ್ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿಎಂ–ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ರಾಜಣ್ಣ ವ್ಯಂಗ್ಯ
ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, “ಈ ಬ್ರೇಕ್ಫಾಸ್ಟ್ ಮೀಟಿಂಗ್ ನೋಡಿದರೆ, ಮೊದಲು ಹೆಣ್ಣು ನೋಡೋಕೆ ಹೋಗುವ ಹಾಗೆ, ನಂತರ ಗಂಡು ನೋಡೋಕೆ ಹೋಗುವ ಆಗಿದೆ.
ಅಲ್ಲದೆ, ಪದ್ಧತಿಗೆ ಹೋಲಿಸಿದ್ದಾರೆ. ಅಲ್ಲದೆ, ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತೆ. ಯಾವುದೇ ರಿವರ್ಸ್ ಆಗೋದಿಲ್ಲ,” ಎಂದಿದ್ದಾರೆ.
ಇದನ್ನೂ ಓದಿ: ನಾಟಿಕೋಳಿ ಮೆನು ಸವಿಯಲು ಡಿಕೆಶಿ ನಿವಾಸಕ್ಕೆ ಆಗಮಿಸಿದ CM
ಬದಲಾವಣೆ ಬೇಕಿದ್ದರೆ ಹೈಕಮಾಂಡ್ ಹೇಳುತ್ತೇ
ಹಳ್ಳಿಗಳಲ್ಲಿ ಶಾಂತಿ ಬೇಕೆಂದರೆ ಕುರಿ–ಕೋಳಿ ಬಲಿ ಕೊಡ್ತಾರೆ. ಆ ರೀತಿ ಎರಡು ಕಡೆ ಆಗಿದೆ. ಬದಲಾವಣೆ ಸಾಧ್ಯತೆ ಕಡಿಮೆ ಎಂದು ನಾವು ಅಂದುಕೊಂಡಿದ್ದೇವೆ. ಬದಲಾವಣೆ ಬೇಕಿದ್ದರೆ ಹೈಕಮಾಂಡ್ ಹೇಳುತ್ತೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರವೇ ಸಾಧ್ಯ ಎಂದು ತಿಳಿಸಿದ್ದಾರೆ.

ದಲಿತ ಸಿಎಂ ಪರಮೇಶ್ವರ್ ಆಗಬೇಕೇಂಬ ಒತ್ತಾಯ ವಿಚಾರ
ದಲಿತ ಸಿಎಂ ಬಗ್ಗೆ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ರಾಜಣ್ಣ, “ಅನಿವಾರ್ಯವಾಗಿ ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡಿದರೆ, ದಲಿತ ಸಿಎಂ ಆಗಬೇಕಾದರೆ ಪರಮೇಶ್ವರ್ನೇ ಮೊದಲ ಆಯ್ಕೆ,” ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸಚಿವರನ್ನ ರಾಜಣ್ಣ ಪುತ್ರ ರಾಜೇಂದ್ರ ಭೇಟಿ ವಿಚಾರ
ರಾಜೇಂದ್ರ ಸ್ಕ್ರೀಪ್ಕೋದಲ್ಲಿ ಹಿರಿಯ ನಿರ್ದೇಶಕ. ಸ್ಕ್ರೀಪ್ಕೋ–ಇಸ್ಕೋ ಏಷ್ಯಾ ಖಂಡದ ದೊಡ್ಡ ಸಹಕಾರಿ ಸಂಸ್ಥೆಗಳು. ಆರ್ಟಿಫಿಷಿಯಲ್ ಮ್ಯಾನ್ಯೂರ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಲ್ಲಿ ಎಲ್ಲಾ ನಿರ್ದೇಶಕರು ಹೋಗುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ.
ದೆಹಲಿಗೆ ತೆರಳಿದ ಶಾಸಕರ ಭೇಟಿ ಕುರಿತು ಅವರು, “ಅವರ ಪ್ರಯತ್ನ ಸಫಲವೂ ಅಲ್ಲ, ವಿಫಲವೂ ಅಲ್ಲ,” ಎಂದು ಹೇಳಿ ರಾಜಕೀಯ ಕುತೂಹಲ ಹೆಚ್ಚಿಸಿದ್ದಾರೆ.
MUST WATCH: ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರ KN RAJANNA ಫಸ್ಟ್ ರಿಯಾಕ್ಷನ್




