CM ಸಿದ್ದರಾಮಯ್ಯ ಉಪಹಾರ ಸವಿಯಲು ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದಾರೆ.

ಕಾವೇರಿ ನಿವಾಸದಿಂದ ಒಬ್ಬರೇ ಹೊರಟ ಸಿಎಂ ಬೆಳಗ್ಗೆ 9:40 ರ ವೇಳೆಗೆ ಡಿಕೆಶಿಯ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದರು. ಸಿಎಂ ಆಗಮಿಸಿದ ಕೂಡಲೇ ಡಿಕೆಶಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿಕೆ ಸುರೇಶ್ (DK Suresh) ಕೂಡ ಸಿಎಂ ಕಾಲಿಗೆ ಬಾಗಿ ನಮಸ್ಕರಿಸಿದರು.
ಉಪಹಾರದ ನಂತರ ಜಂಟಿ ಸುದ್ದಿಗೋಷ್ಠಿ ಸಾಧ್ಯತೆ
ಆರಂಭದಲ್ಲಿ ಸಿಎಂ ಜೊತೆ ಕೆಲವು ಶಾಸಕರು ಸಹ ಬರಬಹುದು ಎಂಬ ಮಾಹಿತಿ ಹರಡಿದ್ದರೂ, ಅಂತಿಮವಾಗಿ CM ಒಬ್ಬರೇ ಡಿಕೆಶಿ ಮನೆಗೆ ಆಗಮಿಸಿದರು. ಉಪಹಾರದ ನಂತರ ಇಬ್ಬರು ಜಂಟಿ ಸುದ್ದಿಗೋಷ್ಠಿ (Pressmeet ) ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಡಿಕೆಶಿ ಅವರ ನಿವಾಸದ ಮುಂದಿನ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದ್ದರು.
ಇದನ್ನು ಓದಿ : Dina Bhavishya|ದಿನ ಭವಿಷ್ಯ 2 ಡಿಸೆಂಬರ್ 2025

ಕಳೆದ ಶನಿವಾರ CM ನಿವಾಸದಲ್ಲಿ ಡಿಕೆಶಿಗೆ ಬ್ರೇಕ್ಫಾಸ್ಟ್
ಕಳೆದ ಶನಿವಾರ ಸಿಎಂ ಕಾವೇರಿ ನಿವಾಸದಲ್ಲಿ ಡಿಕೆಶಿಗೆ Break Fast ಆಯೋಜನೆ ಮಾಡಲಾಗಿತ್ತು. ಇಂದು ಡಿಕೆಶಿ ಅದಕ್ಕೆ ಪ್ರತಿಯಾಗಿ ಸಿಎಂಗೆ ಉಪಹಾರ ಆತಿಥ್ಯ ನೀಡುತ್ತಿದ್ದಾರೆ. ಇದರಿಂದಾಗಿ ರಾಜಕೀಯ ವಲಯದಲ್ಲಿ ಅನೇಕ ಊಹಾಪೋಹಗಳು ಎದ್ದಿವೆ.
ನಾಟಿ ಕೋಳಿ ಸಾರಿನ ಆತಿಥ್ಯ
ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ.
ಇಡ್ಲಿ–ನಾಟಿ ಕೋಳಿ ಸಾರು, ನಾಟಿ ಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ.

ಇವರಿಬ್ಬರ ನಡುವಿನ ಈ ಸ್ನೇಹಪೂರ್ಣ ಉಪಹಾರ ಸಮಾಗಮದ ಹಿಂದೆ ಯಾವ ರಾಜಕೀಯ ಸಂದೇಶ ಅಡಗಿದೆ ಎಂಬುದರ ಬಗ್ಗೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಶುರುವಾಗಿದೆ.
ಇದನ್ನು ನೋಡಿ : PRAJWAL REVANNA | ಹೈಕೋರ್ಟ್ ನಲ್ಲಿ ಪ್ರಜ್ವಲ್ ಕೇಸ್ ಗೆ ಟ್ವಿಸ್ಟ್ - ಜಾಮೀನಾ? ಶಿಕ್ಷೆ ಕಂಟಿನ್ಯೂನಾ?




