Kolar : ಖಾಸಗಿ ಬಸ್ (Private Bus) ಡಿವೈಡರ್ಗೆ (Divider) ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

Kolar : ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಂಚಿನೀಳ್ಳಕೋಟೆ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಂಧ್ರದ ಕಡಪ ಮೂಲದ ಹರಿತ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ ಮದನಪಲ್ಲಿ – ಬೆಂಗಳೂರು ರಸ್ತೆ ಮಾರ್ಗ ಮಧ್ಯೆ ಡಿವೈಡರ್ಗೆ ಬಸ್ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಖಾಸಗಿ ಬಸ್ ಪಲ್ಟಿ – ಮಹಿಳೆ ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ
ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಆಂಧ್ರಪ್ರದೇಶದ ಪೊದುಟೂರು ಮೂಲದ ಅನಿತಾ (58) ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಧ್ರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಆಂದ್ರದ ಬದ್ವೆಲ್ ನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ವೇಗದಲ್ಲಿ ಬರುತ್ತಿದ್ದ ವೇಳೆ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಬಸ್ನ ಚಕ್ರಗಳೇ ಬೇರ್ಪಟ್ಟ ದೃಶ್ಯ ಕಂಡು ಬಂದಿದೆ.

ಡಿವೈಡರ್ಗೆ ಡಿಕ್ಕಿ ಹೊಡೆದ ಬಸ್ ಪಲ್ಟಿ – ಅನೇಕರು ಆಸ್ಪತ್ರೆಗೆ ದಾಖಲು
ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ರೆ, ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡವರನ್ನು ಮದನಪಳ್ಳಿ, ಶ್ರೀನಿವಾಸಪುರ ಹಾಗೂ ಕೋಲಾರ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಡಿವೈಡರ್ಗೆ ಡಿಕ್ಕಿಯಾಗಿ ಖಾಸಗಿ ಬಸ್ ಪಲ್ಟಿ – ಮಹಿಳೆ ಸ್ಥಳದಲ್ಲೇ ಸಾವು
ರಾಯಲ್ಪಾಡು ಪೊಲೀಸರ ಭೇಟಿ
ಸದ್ಯ ವಿಷಯ ತಿಳಿದು ರಾಯಲ್ಪಾಡು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಲ್ದೇ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ಮಂಜು ಕವಿದ ವಾತಾವರಣ ಮುಂದುವರೆದಿದ್ದು, ರಸ್ತೆ ಸರಿಯಾಗಿ ಕಾಣದೇ ಅಲ್ಲಲ್ಲಿ ಅಪಘಾತಗಳು ವರದಿ ಆಗುತ್ತಲೇ ಇದ್ದು, ಚಳಿಗಾಲ ಮುಗಿಯುವವರೆಗೂ ವಾಹನಗಳು ನಿಧಾನವಾಗಿ ಚಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕಿದೆ.
MUST WATCH : ಮಂತ್ರಾಲಯಕ್ಕೆ ಖುಷಿ ಖುಷಿಯಾಗಿ ಹೋಯ್ತು ಕುಟುಂಬ, ಆದ್ರೆ ವಿಧಿಯಾಟ ಬೇರೆಯಾಗಿತ್ತು ..!?




