Devdutt Padikkal Century : ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕದ ಯುವ ದಾಂಡಿಗ ದೇವದತ್ ಪಡಿಕ್ಕಲ್ ಸೆಂಚುರಿ ಸಿಡಿಸಿದ್ದಾರೆ.

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕದ ಯುವ ದಾಂಡಿಗ ದೇವದತ್ ಪಡಿಕ್ಕಲ್ (Devdutt Padikkal) ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ತಮಿಳುನಾಡು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪಡಿಕ್ಕಲ್ ಭರ್ಜರಿ ಅಜೇಯ ಸೆಂಚುರಿಯನ್ನು ಸಿಡಿಸಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ
ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ನಾಯಕ ವರುಣ್ ಚಕ್ರವರ್ತಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಜೋಡಿ ಮಯಾಂಕ್ ಅಗರ್ವಾಲ್ (24) ಮತ್ತು ಶರತ್ ಬಿಆರ್ (53) ಕರ್ನಾಟಕಕ್ಕೆ ಉತ್ತಮ ವೇದಿಕೆ ನಿರ್ಮಿಸಿದರು. ಇದರ ನಂತರ ಮೂರನೇ ಕ್ರಮಾಂಕದಲ್ಲಿ ಬಂದ ಪಡಿಕ್ಕಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಇದನ್ನು ಓದಿ : Bengaluru|‘ನಮ್ಮ ಮೆಟ್ರೋ’ ಹಳದಿ ಮಾರ್ಗಕ್ಕೆ 6ನೇ ರೈಲಿನ ಆಗಮನ

45 ಎಸೆತಗಳಲ್ಲಿ ಭರ್ಜರಿ ಶತಕ
ಪಡಿಕ್ಕಲ್ ಕೇವಲ 45 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು. ಅವರ ಬ್ಯಾಟ್ನಿಂದ 10 ಫೋರ್ಗಳು ಮತ್ತು 6 ಸಿಕ್ಸರ್ಗಳನ್ನು ಸಿಡಿಸಿದರು. ಒಟ್ಟು 46 ಎಸೆತಗಳನ್ನು 102 ರನ್ ಗಳನ್ನು ದೇವದತ್ ಪಡಿಕಲ್ ಗಳಿಸಿದರು. ಪಡಿಕ್ಕಲ್ ಅವರ ಸ್ಫೋಟಕ ಇನಿಂಗ್ಸ್ ನೆರವಿನಿಂದ ಕರ್ನಾಟಕ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಭಾರೀ 245 ರನ್ ಕಲೆಹಾಕಿದೆ.
ಟಿ20 ನಲ್ಲಿ ಪಡಿಕ್ಕಲ್ ಅವರ 4ನೇ ಶತಕ
ಈ ಶತಕ ಪಡಿಕ್ಕಲ್ ಅವರ ಟಿ20 ವೃತ್ತಿಜೀವನದ ನಾಲ್ಕನೇ ಸೆಂಚುರಿಯಾಗಿದೆ.
- ಆರಂಭಿಕ ಬ್ಯಾಟ್ಸ್ಮನ್ ಆಗಿ ಎರಡು ಶತಕ
- ನಾಲ್ಕನೇ ಕ್ರಮಾಂಕದಲ್ಲಿ ಒಂದೆರಡು
- ಇದೀಗ ಮೂರನೇ ಕ್ರಮಾಂಕದಲ್ಲೂ ಶತಕ ಬಾರಿಸಿ ಇನ್ನೊಂದು ಸಾಧನೆ

ಇದನ್ನು ನೋಡಿ : ತುಮಕೂರಿನಲ್ಲಿ ಬಿಸಿಯೂಟ ನೌಕರರ ಅಹೋರಾತ್ರಿ ಧರಣಿ- ಹೇಗಿತ್ತು ನಾರಿಯರ ಆಕ್ರೋಶದ ಕಿಚ್ಚು




