Metro Yellow Line : ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Metro Yellow Line) ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದರಿಂದ ಪ್ರಯಾಣಿಕರ ಕಾಯುವಿಕೆ ಸಮಯ ಹೆಚ್ಚಾಗಿದೆ.
ಇನ್ನು ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು BMRCL ಹೆಚ್ಚುವರಿ ರೈಲುಗಳನ್ನು ಪರಿಚಯಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿದೆ.
ವಾರಾಂತ್ಯದ ವೇಳೆಗೆ ಬರುವ ನಿರೀಕ್ಷೆ
ಆರನೇ ಮೆಟ್ರೋ ರೈಲಿನ ಆರು ಬೋಗಿಗಳಲ್ಲಿ ಮೊದಲ ಮೂರು ಬೋಗಿಗಳು ಈಗಾಗಲೇ ಹೆಬ್ಬಗೋಡಿ ಡಿಪೋ ತಲುಪಿವೆ. ಉಳಿದ ಮೂರು ಬೋಗಿಗಳು ಈ ವಾರಾಂತ್ಯದ ಒಳಗಾಗಿ ಬೆಂಗಳೂರಿಗೆ ಬರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
“ಆರನೇ ರೈಲಿನ ಬೋಗಿಗಳು ಡಿಪೋ ತಲುಪಿವೆ”
“ಆರನೇ ರೈಲಿನ ಮೊದಲ ಮೂರು ಬೋಗಿಗಳು ಡಿಪೋ ತಲುಪಿವೆ. ಉಳಿದ ಬೋಗಿಗಳು ವಾರಾಂತ್ಯದಲ್ಲಿ ಬರಲಿದ್ದು, ಎಲ್ಲಾ ಬೋಗಿಗಳು ಬಂದ ಬಳಿಕ ಅವುಗಳನ್ನು ಜೋಡಿಸಿ ಅಗತ್ಯ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನು ಓದಿ : ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ – ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ BSY

ವಿದ್ಯುತ್ ಸರಬರಾಜು ವ್ಯವಸ್ಥೆಗಳು ಮತ್ತು ಇತರ ಕಾರ್ಯಗಳ ಪರಿಶೀಲನೆ
ಬೋಗಿಗಳನ್ನು ಜೋಡಿಸಿದ ಬಳಿಕ ಸ್ಥಿರ (Static) ಮತ್ತು ಕ್ರಿಯಾತ್ಮಕ (Dynamic) ಪರೀಕ್ಷೆಗಳು ನಡೆಯಲಿದ್ದು, ಅವುಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆ, ವಿದ್ಯುತ್ ಸರಬರಾಜು, ದೂರಸಂಪರ್ಕ ವ್ಯವಸ್ಥೆಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆಗಳು ಪ್ರಮುಖವಾಗಿವೆ. ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಹೊಸ ರೈಲುಗಳನ್ನು ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಬಿಡುವ ಸಾಧ್ಯತೆಯಿದೆ.
ಇನ್ನು ನೂತನ ಬೋಗಿಗಳು ಸೇವೆಗೆ ಸೇರ್ಪಡೆಗೊಂಡ ನಂತರ ಹಳದಿ ಮಾರ್ಗದ ಪ್ರಯಾಣಿಕರ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನು ನೋಡಿ : ಜಲಜೀವನ್ ಮಿಷನ್|99 ಗುತ್ತಿಗೆದಾರರ ವಿರುದ್ಧ ಕ್ರಮ; ಕೇಂದ್ರ ಸಚಿವ ವಿ.ಸೋಮಣ್ಣ




