Metro Yellow Line : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ಮೆಟ್ರೋದ ಯೆಲ್ಲೋ ಲೈನ್ನಲ್ಲಿ ಐದನೇ ಮೆಟ್ರೋ ರೈಲು ಸೇವೆಗೆ ಸಿದ್ಧವಾಗಿದೆ,

Metro Yeellow Line : 70ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವತಿಯಿಂದ ಯೆಲ್ಲೋ ಲೈನ್ (Yellow Line) ನಲ್ಲಿ ಐದನೇ ಮೆಟ್ರೋ ರೈಲು ಸೇವೆಗೆ ಸಿದ್ಧವಾಗಿದೆ. ಈ ಹೊಸ ಸೇರ್ಪಡೆಯು ಪ್ರಯಾಣಿಕರಿಗೆ ಖುಷಿಯ ಸುದ್ದಿಯಾಗಿದೆ.
ನಾಲ್ಕು ರೈಲುಗಳು ಕಾರ್ಯನಿರ್ವಹಿಸುತ್ತಿದ್ದವು
ಈವರೆಗೆ ಯೆಲ್ಲೋ ಲೈನ್ನಲ್ಲಿ ಕೇವಲ ನಾಲ್ಕು ಮೆಟ್ರೋ ರೈಲುಗಳು ಸಂಚರಿಸುತ್ತಿದ್ದವು. ಈಗ ಐದನೇ ರೈಲು ಟ್ರ್ಯಾಕ್ಗೆ ಇಳಿದಿದ್ದು, ಮೆಟ್ರೋ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಾಯಕವಾಗಲಿದೆ.
ಇದನ್ನು ಓದಿ : CM ಸಿದ್ದು – DCM DK ಶಿವಕುಮಾರ್ ಪರಸ್ಪರ ಮುಖಾಮುಖಿ
ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ
ಹೊಸ ರೈಲು ಚಾಲನೆಯಿಂದ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ಇದರಿಂದ ಪ್ರಯಾಣಿಕರಿಗೆ ಕಡಿಮೆ ಸಮಯದೊಳಗೆ, ಸುಗಮ ಮತ್ತು ನಿರಂತರ ಸೇವೆ ಸಿಗಲಿದೆ.

ಯೆಲ್ಲೋ ಲೈನ್ನ ಮಹತ್ವ
ಯೆಲ್ಲೋ ಲೈನ್ ಬೆಂಗಳೂರು ಮೆಟ್ರೋ ಸಂಪರ್ಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ನಗರದ ವಿಭಿನ್ನ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಹೊಸ ರೈಲಿನ ಸೇರ್ಪಡೆ ಪ್ರಯಾಣಿಕರ ಸಂಖ್ಯೆಯ ಹೆಚ್ಚಳವನ್ನು ನಿಭಾಯಿಸಲು ನೆರವಾಗಲಿದೆ.
BMRCL ನಿಂದ ಮಾಹಿತಿ
ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಇನ್ನಷ್ಟು ರೈಲುಗಳನ್ನು ಸೇರಿಸುವ ಯೋಜನೆಯೂ ಇದೆ ಎಂದು ಸಂಸ್ಥೆ ಹೇಳಿದೆ.
ಇದನ್ನು ನೋಡಿ : ಕರ್ನಾಟಕ ರಾಜ್ಯೋತ್ಸವದಂದು ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ; ಹಳಿಗಿಳಿಯಿತು ಐದನೇ ಮೆಟ್ರೋ




