
SIRA NEWS : ಹಲವು ಡಿಜೆ ಚರ್ಚೆಯ ನಡುವೆಯೂ ಶಿರಾದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು. ಇತ್ತೀಚಿಗೆ ಸುದ್ದಿಗೋಷ್ಠಿ ನಡೆ ಸಿದ ಎಸ್ ಪಿ ಅಶೋಕ್ ಡಿಜೆ ಗೆ ಅವಕಾಶವಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ರು. ಜೊತೆಗೆ ಕೆಲವು ಕಲಾತಂಡಗಳಿಗೆ ವಾಧ್ಯ ನುಡಿಸಲು ಅವಕಾಶ ನೀಡಿತ್ತು. ಇತ್ತ ಶಿರಾದಲ್ಲಿ ಹಿಂದೂ ಮಹಾಗಣಪತಿ ವಿಸರ್ಜ ನೆಯು ಅತ್ಯಂತ ಸುಗಮವಾಗಿ ಸಾಗಿದೆ.
ಶಿರಾ ನಗರದ ಗವಿ ಅಂಜುನೆಯ ದೇವಾಲಯ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಯುವಕ–ಯುವತಿಯರು, ಮಕ್ಕಳು ಸೇರಿ ಸಾವಿರಾ ರು ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಶುರುವಾದ ಮೆರವಣಿಗೆ ಮಧ್ಯರಾತ್ರಿ ತನಕ ನಡೆಯಿತು. ವಿವಿಧ ಕಲಾ ತಂಡಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೂವುಗ ಳಿಂದ ಅಲಂಕರಿಸಿದ ಟ್ರ್ಯಾಕ್ಟರ್ಗಳಲ್ಲಿ ಗಣಪತಿಯ ಮೆರವಣಿಗೆ ಮಾಡಲಾಯಿತು.
ವಿವಿಧ ಹಾಡು, ತಮಟೆ ಸದ್ದಿಗೆ ಯುವ ಸೇರಿದಂತೆ ಮಹಿಳೆಯರು ಸಮೂಹ ಕುಣಿದು ಕುಪ್ಪಳಿಸಿದರು. ನಗರ ದ ವಿವಿದ ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ರಾಜಕೀಯ ಪಕ್ಷಗಳು ಮುಖಂಡರು ಅತ್ಯಂತ ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆ ಯುವ ನಿಟ್ಟಿನಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದರು. ನೂರಾರು ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಶುಕ್ರವಾರ ಗಣಪತಿ ಮೂರ್ತಿಗಳು ಸಾಗುವ ಮಾರ್ಗದಲ್ಲಿ ಪೊಲೀಸ್ ತಂಡದಿಂದ ಪಥಸಂಚಲನ ನಡೆಸಲಾಗಿತ್ತು. ಪೂರ್ವಭಾವಿಯಾಗಿ ತಯಾರಿ ನಡೆಸಿ, ಹೆಚ್ಚಿನಸಮಸ್ಯೆಯಾಗದಂತೆ ಕ್ರಮವಹಿಸಿದರು.
ಇನ್ನು ಗಣೇಶ ವಿಸರ್ಜನೆಯ ವೇಳೆ ವಿವಿಧ ರಾಜಕೀಯ ಮುಖಂಡರು ವಾಧ್ಯಗಳ ಸದ್ದಿಗೆ ಹೆಜ್ಜೆ ಹಾಕಿದರು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡಿದರು. ಬೆಳಿಗ್ಗೆಯಿಂದಲೇ ಒಂ ದು ಬದಿ ರಸ್ತೆ ಬಂದ್ ಮಾಡಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಇನ್ನೂ ನಗರದ ಖಾಸಗಿ ಬಸ್ ನಿಲ್ದಾಣ ದಲ್ಲಿ ಗಣಪತಿಯ ವಿಸರ್ಜನೆಯ ಅಂಗವಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ನಗದ ತುಂಬೆಲ್ಲ ಕೆಸರಿಬಾವುಟ ರಾಜಾಜಿಸುತ್ತಿದ್ದವು. ಇದನ್ನು ಕಂಡ ಭಕ್ತರು ಹರ್ಷೋ ದ್ಘಾರವನ್ನು ಹೊರಹಾಕಿದ್ರು.




