
RAICHUR NEWS : ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮವಾಗಿ ಕೃಷ್ಣ ಮತ್ತು ತುಂಗಾಭದ್ರ ನದಿಗಳಲ್ಲಿ ಹೊಂಡು ಮಿಶ್ರಿತ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ, ನಗರದ ನಿವಾಸಿಗಳು ಆರೋಗ್ಯದ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ, ಸೋಸಿ ಮಾತ್ರ ಬಳಸಬೇಕು ಎಂದು ರಾಯಚೂ ರು ಮಹಾನಗರ ಪಾಲಿಕೆ ತಿಳಿಸಿದೆ.
ನಗರದ ಪ್ರಮುಖ ಜಲಶುದ್ಧೀಕರಣ ಘಟಕಗಳಾದ ರಾಂಪೂರು ಮತ್ತು ಚಿಕ್ಕಸೂಗೂ ರಿನಿಂದ ಶುದ್ಧೀಕೃತ ಕುಡಿಯುವ ನೀರಿನ ಸರಬರಾಜು ನಡೆಯುತ್ತಿದೆಯಾದರೂ, ಸುರಕ್ಷಿತ ನೀರಿನ ಬಳಕೆಗಾಗಿ ನಾಗರಿಕರು ವೈಯಕ್ತಿಕ ಮಟ್ಟದಲ್ಲಿ ಜಾಗೃತರಾಗ ಬೇಕೆಂದು ಪಾಲಿಕೆಯ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




