Saptami Gowda : ವಿಂಟರ್ನಲ್ಲಿ ಟ್ರೆಂಡಿಯಾಗಿರುವ ವೆಲ್ವೆಟ್ ಸೀರೆಯಲ್ಲಿ ನಟಿ ಸಪ್ತಮಿ ಗೌಡ ಡಿಸೆಂಟಾಗಿ ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಗ್ಲಾಮರಸ್ ಟಚ್ ನೀಡಲು ಸ್ಲಿವ್ಲೆಸ್ ಬ್ಲೌಸ್ ಧರಿಸಿದ್ದಾರೆ. ಅವರ ಸೀರೆಯ ಲುಕ್ ಹೇಗಿದೆ? ಇಲ್ಲಿದೆ ಫ್ಯಾಷನ್ ರಿವ್ಯೂ.

Saptami Gowda : ವಿಂಟರ್ ಫ್ಯಾಷನ್ಗೆ ಸೂಕ್ತವಾಗಿರುವ ವೆಲ್ವೆಟ್ ಸೀರೆಗೆ ನಟಿ ಸಪ್ತಮಿ ಗೌಡ ಮತ್ತೊಂದು ಕ್ಲಾಸಿ ಸ್ಪರ್ಶ ನೀಡಿದ್ದಾರೆ. ಸಿತಾರಾ ಕುಡಿಗೆ ಬ್ರ್ಯಾಂಡ್ನ ಡಾರ್ಕ್ ಗ್ರೀನ್ ಶೇಡ್ನ ವೆಲ್ವೆಟ್ ಸೀರೆಯಲ್ಲಿ ಅವರು ಕಾಣಿಸಿಕೊಂಡಿದ್ದು, ಸಿಂಪಲ್ ಆದರೂ ಡಿಸೆಂಟ್ ಲುಕ್ಗೆ ಸ್ಲಿವ್ಲೆಸ್ ಬ್ಲೌಸ್ ಮೂಲಕ ಗ್ಲಾಮರಸ್ ಟಚ್ ನೀಡಿದ್ದಾರೆ.
ವೆಲ್ವೆಟ್ ಸೀರೆಯಲ್ಲಿ ಡಿಸೆಂಟಾಗಿ ಕಾಣಿಸಿಕೊಂಡ ಸಪ್ತಮಿಗೌಡ
ಸಪ್ತಮಿ ಗೌಡ ಸೀರೆ ಫ್ಯಾಷನ್ ಮೂಲಕ ತಮ್ಮ ಫಾಲೋವರ್ಗಳನ್ನು ಆಗಾಗ್ಗೆ ಸೆಳೆಯುವ ತಾರೆ. ವಿಭಿನ್ನ ಸೀರೆಯ ಶೈಲಿಗಳು, ಸರಳ ಆದರೆ ಮನಸೆಳೆಯುವ ಫ್ಯಾಷನ್ ಸೆನ್ಸ್—ಇವೆಲ್ಲ ಅವರ ಸ್ಟೈಲ್ ಐಡೆಂಟಿಟಿಯಾಗಿವೆ.

ವೆಲ್ವೆಟ್ ಸೀರೆ—ವಿಂಟರ್ನ ಹಾಟ್ ಟ್ರೆಂಡ್
ಪ್ರತಿ ಚಳಿಗಾಲದಲ್ಲಿಯೂ ವೆಲ್ವೆಟ್ ಸೀರೆಗಳು ಮತ್ತೆ ಟ್ರೆಂಡ್ಗೆ ಬರುತ್ತವೆ. ದಪ್ಪ ಫ್ಯಾಬ್ರಿಕ್ ಇರುವುದರಿಂದ ವಿಂಟರ್ ಪಾರ್ಟಿವೇರ್ಗೆ ಇದು ಹೆಚ್ಚು ಸೂಕ್ತ. ಅನೇಕ ತಾರೆಯರು ವೆಲ್ವೆಟ್ ಫ್ಯಾಬ್ರಿಕ್ ಅನ್ನು ಕಸ್ಟಮೈಸ್ ಮಾಡಿಕೊಂಡು ವಿಶಿಷ್ಟ ಪಾರ್ಟಿವೇರ್ ಸೀರೆಯಾಗಿ ಪರಿವರ್ತಿಸುತ್ತಾರೆ.
ಇದನ್ನೂ ಓದಿ : Actress Samantha: ಸದ್ದಿಲ್ಲದೆ ನಡೇದಿದ್ಯಾ ನಟಿ ಸಮಂತಾ ಎರಡನೇ ಮದುವೆ..?
ಸಪ್ತಮಿ ಗೌಡ ಸೀರೆ ಲವ್
ಸಪ್ತಮಿ ಗೌಡರ ಲುಕ್ ಡಿಸೆಂಟ್ ಮತ್ತು ಸಿಂಪಲ್, ವೆಲ್ವೆಟ್ ಸೀರೆಯಲ್ಲಿರುವ ಸ್ಲೀವ್ಲೆಸ್ ಬ್ಲೌಸ್ ಗ್ಲಾಮರ್ ಟಚ್ ನೀಡಿದೆ. ಡಾರ್ಕ್ ಗ್ರೀನ್ ಶೇಡ್ ನಟಿಗೆ ನಚ್ ನೀಡಿದೆ. ಆದರೆ ಪಾರ್ಟಿವೇರ್ ಆಗಿದ್ದರೂ ಸೀರೆಯ ಒಟ್ಟೂ ಲುಕ್ ಎಷ್ಟು ಹೈಲೈಟ್ ಆಗಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಒಟ್ಟಾಗಿ, ಈ ವಿಂಟರ್ನಲ್ಲಿ ಸಪ್ತಮಿ ಗೌಡರ ವೆಲ್ವೆಟ್ ಸೀರೆ ಲುಕ್ ಸಿಂಪ್ಲಿಸಿಟಿ ಮತ್ತು ಗ್ಲಾಮರ್ ಮಿಶ್ರಣದ ಮತ್ತೊಂದು ಉದಾಹರಣೆಯಾಗಿದೆ.
MUST WATCH: KANTARA SHOW CANCELLED | S MALL ನಲ್ಲಿ ಫುಲ್ ಫೈಟ್




