Actress Samantha : ನಟಿ ಸಮಂತಾ ಎರಡನೇ ಮದುವೆ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಸಮಂತಾ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ.

Actress Samantha: ಟಾಲಿವುಡ್ ನಟಿ ಸಮಂತಾ ಮತ್ತೆ ಮದುವೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದಿ ಫ್ಯಾಮಿಲಿ ಮ್ಯಾನ್ 2 ನಿರ್ದೇಶಕರ ಜೊತೆ ಸಮಂತಾ ಮದುವೆ
ಖ್ಯಾತ ನಿರ್ದೇಶಕ ರಾಜ್ ನಿದಿಮೋರು ಅವರ ಜೊತೆ ಸಮಂತಾ ಡಿಸೆಂಬರ್ 1ರಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಮದುವೆಯಾಗಿದ್ದಾರೆ ಎಂಬ ಗಾಸಿಪ್ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಶ್ಯಾಮಲಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣ
ಈ ನಡುವೆ, ರಾಜ್ ನಿದಿಮೋರು ಅವರ ಪತ್ನಿ ಶ್ಯಾಮಲಿ ಇನ್ಸ್ಟಾಗ್ರಾಮ್ನಲ್ಲಿ, “ಹತಾಶರಾದ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ” ಎಂಬ ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಸಮಂತಾ–ರಾಜ್ ಮದುವೆ ವದಂತಿ ಹೊತ್ತಿನಲ್ಲಿ ಈ ಪೋಸ್ಟ್ ಬಂದಿರುವುದು ನೆಟ್ಟಿಗರ ಗಮನ ಸೆಳೆಯುತ್ತಿದೆ.

‘ದಿ ಫ್ಯಾಮಿಲಿ ಮ್ಯಾನ್ 2’ ಹಾಗೂ ‘ಸಿಟಾಡೆಲ್’ ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಬಳಿಕ ಸಮಂತಾ ಮತ್ತು ರಾಜ್ ನಿಧಿಮೋರು ನಡುವೆ ಆತ್ಮೀಯತೆ ಹೆಚ್ಚಿದೆ ಎಂಬ ಮಾತು ಹರಿದಿದೆ.
ಇದನ್ನೂ ಓದಿ: ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ
ರಾಜ್ ನಿದಿಮೋರು ಜೊತೆ ಇಶಾ ಯೋಗ ಕೇಂದ್ರದಲ್ಲಿ ಡಿಸೆಂಬರ್ 1 ರಂದು ವಿವಾಹ
ಸದ್ಗುರು ಜಗ್ಗಿ ವಾಸುದೇವ್ ಅವರ ಮೇಲಿನ ಭಕ್ತಿ ಮತ್ತು ಇಶಾ ಫೌಂಡೇಶನ್ನೊಂದಿಗಿನ ಅವರ ಒಡನಾಟದಿಂದಾಗಿ ಸಮಂತಾ ಅಲ್ಲಿ ಮದುವೆಯಾಗಿದ್ದಾರೆ ಎಂಬ ವದಂತಿ ಇದೆ. ಸಮಂತಾ ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಇರುವ ಪೋಸ್ಟ್ಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಾಡುತ್ತಿದ್ದಾರೆ.
ಮದುವೆಯಲ್ಲಿ ಕೇವಲ ಆಪ್ತರಷ್ಟೇ ಇದ್ದರು ಎನ್ನಲಾಗ್ತಿದೆ. ಆದರೆ ಸಮಂತಾ ಹಾಗೂ ರಾಜ್ ನಿಧಿಮೋರು ಅವರಿಬ್ಬರೂ ಈ ಸುದ್ದಿಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
MUST WATCH: ಸಿನಿಮಾ ಪ್ರಮೋಷನ್ಗೆ ತುಮಕೂರಿಗೆ EKKA MOVIE ತಂಡ ಎಂಟ್ರಿ




