
Samantha : ತೆಲುಗು ನಟಿ ಸಮಂತ್ ರುತ್ ಪ್ರಭು ತಮ್ಮ ಆಪ್ತರ ಜೊತೆ ದೀಪಾವಳಿ ಆಚರಿಸಿದ್ದಾರೆ.

ಪ್ರಖ್ಯಾತ ತೆಲುಗು ನಟಿ ಸಮಂತಾ ರುತ್ ಪ್ರಭು, ಈ ಬಾರಿ ದೀಪಾವಳಿ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ, ಆಪ್ತರ ನಡುವೆ ಆಚರಿಸಿದ್ದಾರೆ. ನಟಿಯ ಆಚರಿಸಿರುವ ದೀಪಾವಳಿ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಶೇಷವಾಗಿ ಚಲನಚಿತ್ರ ನಿರ್ದೇಶಕ ರಾಜ್ ನಿಡಿಮೋರ್ ಅವರೊಂದಿಗೆ ಸೇರಿ ಹಬ್ಬದ ಕ್ಷಣಗಳನ್ನು ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಹಬ್ಬದ ದಿನ ಸಮಂತಾ ಹಸಿರು ಬಣ್ಣದ ಸೂಟ್ನಲ್ಲಿ ಮಿಂಚಿದ್ದರೆ, ರಾಜ್ ನಿಡಿಮೋರ್ ಬ್ಲೂ ಕುರ್ತಾದಲ್ಲಿ ಮಿಂಚಿದ್ದಾರೆ. ಇಬ್ಬರೂ ಮನೆಯ ಒಳಾಂಗಣ ಅಲಂಕಾರ, ಹೂವಿನ ದಾರಗಳು, ದೀಪದ ಕಂಚಿನ ರೋಷಣೆಯಲ್ಲಿ ಸಂತೋಷದಿಂದ ಒಂದೆಡೆ ಕುಳಿತು ಸ್ಮೈಲ್ ಸಹಿತ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.
ಇದನ್ನು ಓದಿ : ನಿನ್ನೆವರೆಗೆ 23 ಲಕ್ಷ ಭಕ್ತರರಿಂದ ಹಾಸನಾಂಬೆಯ ದರ್ಶನ

ಇಷ್ಟೇ ಅಲ್ಲದೆ, ಸಮಂತಾ ಪಟಾಕಿಗಳನ್ನು ಹಚ್ಚುತ್ತಿರುವ ವಿಡಿಯೋಗಳು ಕೂಡ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಹಬ್ಬದ ಸಂತೋಷ, ಸೌಂದರ್ಯ, ಸಮೀಪತೆಯ vibesನ್ನು ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದೇನು ಹೊಸ ಸಂಬಂಧಕ್ಕೆ ಇಂಗಿತವೋ ಎಂಬ ಚರ್ಚೆಗಳು ಸಿನಿಪ್ರಿಯರ ನಡುವೆ ನಡೆಯುತ್ತಿವೆ. ಆದರೆ, ಸಮಂತಾ ಅಥವಾ ರಾಜ್ ನಿಡಿಮೋರ್ ಈ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇದನ್ನು ನೋಡಿ : ನಿರ್ದೇಶಕ ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ




