Hasanamba : ವರ್ಷದಲ್ಲಿ ಕೇವಲ ಒಂದೇ ಬಾರಿ ದರ್ಶನ ನೀಡುವ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತರ ಸಾಗರವೇ ಹರಿದುಬಂದಿದೆ.

ವರ್ಷದಲ್ಲಿ ಕೇವಲ ಒಂದೇ ಬಾರಿ ದರ್ಶನ ನೀಡುವ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತರ ಸಾಗರವೇ ಹರಿದುಬಂದಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಅಕ್ಟೋಬರ್ 10ರಿಂದ ಅಕ್ಟೋಬರ್ 20ರ ವರೆಗೆ 23 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇಂದಿನವರೆಗಿನ ಇತಿಹಾಸದಲ್ಲಿಯೇ ಇದು ಅತಿದೊಡ್ಡ ಸಂಖ್ಯೆಯ ಭಕ್ತಸಂದಣಿ.
ದೇವಾಲಯದ ಆಡಳಿತ ಸಮಿತಿಯ ಮಾಹಿತಿ ಪ್ರಕಾರ, ಈ ಅವಧಿಯಲ್ಲಿ ರೂ. 1000 ಹಾಗೂ ರೂ. 300 ವಿಶೇಷ ದರ್ಶನ ಟಿಕೆಟ್ ಮಾರಾಟದ ಜೊತೆಗೆ ಲಾಡು ಪ್ರಸಾದ ಮಾರಾಟದಿಂದ ದೇವಾಲಯಕ್ಕೆ ಒಟ್ಟು ₹17 ಕೋಟಿ ಆದಾಯ ಲಭಿಸಿದೆ. ಈ ಮೂಲಕ ಹಾಸನಾಂಬೆ ಜಾತ್ರೆ ಆರ್ಥಿಕವಾಗಿಯೂ ಭಕ್ತಿಭಾವದಿಂದಲೂ ಯಶಸ್ವಿಯಾಗಿ ನಡೆದಿದೆ.
ಇದನ್ನು ಓದಿ : ಕಿಯಾರಾ, ಸಿದ್ಧಾರ್ಥ್ ಮನೆಯಲ್ಲಿ ದೀಪಾವಳಿ ಸಂಭ್ರಮ

ಇಂದು (ಅ.21) ಬೆಳಗ್ಗೆ 7:30ರ ತನಕ ದೇವಾಲಯದ ಮುಂಭಾಗದ ಸಾಲುಗಳು ಖಾಲಿಯಾಗಿ ದ್ದರೂ, ನಂತರ ಭಕ್ತರ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳ ಕಂಡುಬಂದಿದೆ. ಧರ್ಮದರ್ಶನದ ಸಾಲು, ವಿಶೇಷ ದರ್ಶನದ ಸಾಲುಗಳಲ್ಲಿಯೂ ಭಕ್ತರು ಮುಗಿಬಿದ್ದಿದ್ದಾರೆ. ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಸಾಗೋರಾಪಾದಿಯಿಂದ ದೇವಾಲಯ ದತ್ತ ಹರಿದುಬರುತ್ತಿದ್ದಾರೆ.
ದೇವಿಯ ದರ್ಶನದ ಅಂತಿಮ ದಿನ ಅ.22 (ಮಂಗಳವಾರ), ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಹೆಚ್ಚಿನ ಜನಸಂದಣಿಯ ಕಾರಣದಿಂದ ಧೈರ್ಯ ಮತ್ತು ಶಿಸ್ತು ಪಾಲನೆ ಮಾಡುವುದು ಅಗತ್ಯ. ದೇವಾಲಯದ ವ್ಯವಸ್ಥಾಪನೆ ಭದ್ರತೆ ಮತ್ತು ಸುಗಮ ದರ್ಶನಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

ಇದನ್ನು ನೋಡಿ : ನಿನ್ನೆವರೆಗೂ 23 ಲಕ್ಷ ಜನರಿಂದ ದಾಖಲೆಯ ಹಾಸನಾಂಬೆ ದರ್ಶನ




