Karnataka Politics: ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Karnataka Politics: ರಾಜ್ಯ ರಾಜಕೀಯದಲ್ಲಿ ಊಹಾಪೋಹಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನಿವಾಸದಲ್ಲಿ ಡಿನ್ನರ್ ಸಭೆ ನಡೆಸಿ, ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಕಾವೇರಿ ನಿವಾಸದಲ್ಲಿ ಸಿಎಂ–ಡಿಸಿಎಂ ಒಗ್ಗಟ್ಟಿನ ಪ್ರದರ್ಶನ
ಡಿ.ಕೆ. ಶಿವಕುಮಾರ್ ಮಾತನಾಡಿ, “ನನ್ನ ರಾಜಕೀಯ ನಿಲುವು ಮತ್ತು ಸಿದ್ದರಾಮಯ್ಯ ಅವರ ನಿಲುವು ಒಂದೇ. ಪಕ್ಷದ ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ. ನಮ್ಮಲ್ಲಿ ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು.
ರಾಜ್ಯ ರಾಜಕೀಯಕ್ಕೆ ಹೊಸ ಸಂದೇಶ
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೊದಲ ಆರು ತಿಂಗಳು ನನಗೆ ಸಚಿವ ಸ್ಥಾನ ಸಿಗಲಿಲ್ಲ. ಆಗಲೂ ಒಂದು ಮಾತನ್ನೂ ಆಡಿರಲಿಲ್ಲ. ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಅಚಲ ಎಂದು ಹೇಳಿದರು.
ಇದನ್ನೂ ಓದಿ: ಕುರ್ಚಿ ಕದನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್
2028–2029 ಚುನಾವಣೆ ಗುರಿ: ಕಾಂಗ್ರೆಸ್ ಬಲಪಡಿಸಲು ಸಂಯುಕ್ತ ಪ್ರಯತ್ನ
2028ರ ವಿಧಾನಸಭೆ ಮತ್ತು 2029ರ ಲೋಕಸಭೆ ಚುನಾವಣೆಗಳ ಹಿನ್ನೆಲೆ ಸೇರಿದಂತೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಲಪಡಿಸುವ ಗುರಿ ಹೊಂದಿರುವುದಾಗಿ ಇಬ್ಬರು ನಾಯಕರು ತಿಳಿಸಿದರು.
“ಈಗ ರಾಷ್ಟ್ರಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ವಹಿಸಲಿದೆ. 2028ರಲ್ಲಿ ರಾಜ್ಯದಲ್ಲೂ, 2029ರಲ್ಲಿ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಸರ್ಕಾರ ತರಬೇಕು ಎಂಬ ಗುರಿಗೆ ನಮ್ಮ ತಂಡ ಈಗಲೇ ಕೆಲಸ ಆರಂಭಿಸಿದೆ.” ಎಂದರು.

ಒಗ್ಗಟ್ಟಿನ ಸಂದೇಶ
ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಮನೆಗೆ ಭೋಜನ ಕೂಟಕ್ಕೂ ಶೀಘ್ರದಲ್ಲೇ ಹಾಜರಾಗಲಿರುವುದಾಗಿ ತಿಳಿಸಿ, ಇಬ್ಬರ ನಡುವಿನ ಸಹಕಾರ ಮುಂದುವರಿಯುತ್ತದೆ ಎಂಬ ಸ್ಪಷ್ಟ ಸಂದೇಶ ನೀಡಲಾಯಿತು.
ಜನರ ವಿಶ್ವಾಸಕ್ಕೆ ತಕ್ಕ ಸೇವೆ
“ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಜನರ ಆಕಾಂಕ್ಷೆ ಈಡೇರಿಸುವುದು ನಮ್ಮ ಕರ್ತವ್ಯ,” ಎಂದು ಡಿಕೆಶಿ ತಿಳಿಸಿದರು.
MUST WATCH: SIDDU V/S DKS | ಸಿಎಂ, ಡಿಸಿಎಂ ಬಣದ ನಡುವೆ ಮುಸುಕಿನ ಗುದ್ದಾಟ – ಬಣಗಳ ನಡುವೆ ಟೆಂಪಲ್ ರನ್ ಶುರು




