JJM Karnataka Progress : ಪ್ರಿಯಾಂಕ್ ಖರ್ಗೆ ಜಲ ಜೀವನ್ ಮಿಷನ್ಗೆ ಕೇಂದ್ರದ ಬಾಕಿ ಅನುದಾನ ಬಿಡುಗಡೆ ಮಾಡಲು ಪತ್ರ ಬರೆದು ಒತ್ತಾಯಿಸಿದ್ದಾರೆ. ಗ್ರಾಮೀಣ ಮನೆಗಳಿಗೆ ನೀರು ಸಂಪರ್ಕಕ್ಕೆ ನಿಧಿ ಅವಶ್ಯಕ.

JJM Karnataka Progress : ಜಲ ಜೀವನ್ ಮಿಷನ್ಗೆ ಕೇಂದ್ರದಿಂದ ಹಣ ಬಿಡುಗಡೆ ಕೇಳಿದ ಪ್ರಿಯಾಂಕ್ ಖರ್ಗೆ
ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಲ ಜೀವನ್ ಮಿಷನ್ (JJM) ಅಡಿಯಲ್ಲಿ ಬಾಕಿ ಉಳಿದಿರುವ ಕೇಂದ್ರದ ಪಾಲಿನ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಕೇಂದ್ರ ಅನುದಾನ ಬಿಡುಗಡೆ ಇಲ್ಲ — ರಾಜ್ಯದ ಆತಂಕ ಹೆಚ್ಚಳ
ಸಚಿವ ಖರ್ಗೆ ತಿಳಿಸಿದಂತೆ, ಈ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ಈಗಾಗಲೇ ₹1,500 ಕೋಟಿ ಬಿಡುಗಡೆಯನ್ನು ಮಾಡಿದ್ದಾರೆ, ಆದರೆ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹ ಬಿಡುಗಡೆ ಆಗಿಲ್ಲ.ಇದರಿಂದ ಯೋಜನೆ ನಿಧಾನಗತಿಯಾಗುವ,ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.ಪ್ರಿಯಾಂಕ್ ಖರ್ಗೆ ವಿವರಿಸಿದಂತೆ, ಕರ್ನಾಟಕವು ಜಲ ಜೀವನ್ ಮಿಷನ್ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.
- ಶೇಕಡಾ 86% ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ
- ಬಹು-ಗ್ರಾಮ ಮತ್ತು ಏಕ-ಗ್ರಾಮ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ
- 2023–24, 2024–25, 2025–26ರಲ್ಲಿ ಗಣನೀಯ ಭೌತಿಕ ಹಾಗೂ ಆರ್ಥಿಕ ಸಾಧನೆ
ಯೋಜನೆ ವೆಚ್ಚ ಮತ್ತು ರಾಜ್ಯ–ಕೇಂದ್ರ ಪಾಲು
ಪ್ರಸ್ತುತ ಯೋಜನೆಯ ಒಟ್ಟು ವೆಚ್ಚ ₹35,698.58 ಕೋಟಿ.
- ರಾಜ್ಯದ ಪಾಲು: ₹24,598.45 ಕೋಟಿ
- ಕೇಂದ್ರದ ಪಾಲು: ಕೇವಲ ₹11,786.63 ಕೋಟಿ
ಈ ಹಣಕಾಸು ವರ್ಷಕ್ಕೆ ರಾಜ್ಯವು ಈಗಾಗಲೇ ₹11,050 ಕೋಟಿ ಹಂಚಿಕೆ ಮಾಡಿದೆ ಎಂದು ಖರ್ಗೆ ತಿಳಿಸಿದ್ದಾರೆ.
ಯೋಜನೆಗೆ ಸಂಬಂಧಿಸಿ:
- ₹1,700 ಕೋಟಿ ಬಿಲ್ಗಳು ಪಾವತಿ ಬಾಕಿ
- ₹2,600 ಕೋಟಿ ಮೌಲ್ಯದ ಬಿಲ್ಗಳು ಪೈಪ್ಲೈನ್ನಲ್ಲಿ
ಈ ಹಿನ್ನೆಲೆಯಲ್ಲಿ ಕೇಂದ್ರ ಅನುದಾನ ತಕ್ಷಣ ಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರಕ್ಕೆ ನೀಡಿದ ತುರ್ತು ವಿನಂತಿ
ಸಚಿವ ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ: “ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಲ್ಲಿ ಮತ್ತಷ್ಟು ವಿಳಂಬ ಮಾಡಿದರೆ ಜಲ ಜೀವನ್ ಮಿಷನ್ ಕಾಮಗಾರಿಗಳು ನಿಧಾನವಾಗಬಹುದು ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಗ್ರಾಮೀಣ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸಲು ಕೇಂದ್ರದ ತ್ವರಿತ ಬೆಂಬಲ ಅಗತ್ಯ.”




