Chitradurga Accident : ಕಬ್ಬಿಣವನ್ನು ಸಾಗಿಸುತ್ತಿದ್ದ ಲಾರಿಗೆ, ಕೋಳಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಚಿತ್ರದುರ್ಗದ ಹಿರಿಯೂರು ತಾಲೂಕಿನ ಮೈಸೂರು ರಸ್ತೆಯಲ್ಲಿರುವ ಹಿಂಡಸಕಟ್ಟೆ ಗ್ರಾಮದ ಬಳಿ ಕಬ್ಬಿಣವನ್ನು ಸಾಗಿಸುತ್ತಿದ್ದ ಲಾರಿಗೆ, ಕೋಳಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ತಿಪಟೂರು ಮೂಲದ 22 ವರ್ಷದ ಚಂದನ್ ಗೌಡ, 17 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ.

ಇದನ್ನು ಓದಿ : Health Tips|ಚಳಿಗಾಲದಲ್ಲಿ ಪ್ರತಿಯೊಬ್ಬರೂ ಖರ್ಜೂರ ತಿನ್ನಲೇ ಬೇಕು! ಯಾಕೆ ಗೊತ್ತಾ..?
ಇಬ್ಬರು ಸ್ಥಳದಲ್ಲೇ ಸಾವು
ಕೋಳಿ ಸಾಗಿಸುತ್ತಿದ್ದ ಲಾರಿ ಮುಂದೆ ಹೋಗುತ್ತಿದ್ದ ಕಬ್ಬಿಣದ ಲಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಬ್ಬಿಣದ ಸರಳುಗಳು ಲಾರಿಯ ಒಳಗೆ ನುಗ್ಗಿದ ಪರಿಣಾಮವಾಗಿ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ PSI ಮಹೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳು
ಇನ್ನು ಈ ಹೊಸ ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಈ ಮಾರ್ಗದಲ್ಲಿ ಕಳೆದ ಕೆಲವು ದಿನಗಳಿಂದ ಅಪಘಾತಗಳು ನಿರಂತರವಾಗಿ ಹೆಚ್ಚುತ್ತಿವೆ. ಅಪಘಾತ ಸಂಭವಿಸಿದ ಭಾಗದಲ್ಲಿ ತಿರುವು ಇರುವ ಕುರಿತು ಯಾವುದೇ ಸೂಚನಾ ಫಲಕವಿಲ್ಲ.ಸ್ಪೀಡ್ ಬ್ರೇಕರ್ ಇಲ್ಲ, ವೇಗ ನಿಯಂತ್ರಣಕ್ಕೆ ಅಗತ್ಯವಾದ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ಇದರಿಂದ ವಾಹನಗಳು ವೇಗದಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನು ನೋಡಿ : TUMAKURU | ಲಕ್ಷಾಂತರ ಖರ್ಚು ಮಾಡಿ ಅಂಗನವಾಡಿ ಕಟ್ಟಿದ್ದಾರೆ ಆದ್ರೆ ಒಂದು ವರ್ಷ ಆಗಿದೆ ಓಪನ್ ಮಾಡಿಲ್ಲ ಅಧಿಕಾರಿಗಳು




