Tumakuru News : ಬಾಲಕಾರ್ಮಿಕರ ನಿಯಂತ್ರಣಕ್ಕೆ ಅದೆಷ್ಟೋ ಕಾನೂನುಗಳನ್ನು ತಂದ್ರು ಕೂಡ ಬಾಲ ಕಾರ್ಮಿಕ ಪದ್ಧತಿ ಮಾತ್ರ ಕಡಿಮೆ ಆಗ್ತಿಲ್ಲ.

Tumakuru News : ಬಾಲಕಾರ್ಮಿಕರ ನಿಯಂತ್ರಣಕ್ಕೆ ಅದೆಷ್ಟೋ ಕಾನೂನುಗಳನ್ನು ತಂದ್ರು ಕೂಡ ಬಾಲ ಕಾರ್ಮಿಕ ಪದ್ಧತಿ ಮಾತ್ರ ಕಡಿಮೆ ಆಗ್ತಿಲ್ಲ. ತುಮಕೂರು ಜಿಲ್ಲಾ ಪ್ರವಾಸದಲ್ಲಿರೋ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಅವರು, ಇಂದು ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ್ರು.
ಆಯೋಗದ ಸದಸ್ಯರೊಂದಿಗೆ ಮಾತುಕತೆ
ಅಲ್ದೇ ಕಾರ್ಮಿಕ ಅಧಿಕಾರಿಗಳೊಂದಿಗೆ ಮಕ್ಕಳ ಹಾಗೂ ಹದಿಹರೆಯದವರ ಕಾರ್ಮಿಕ ಪದ್ಧತಿ ಕಾಯ್ದೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ್ರು. ಸಭೆಯುಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು, ಆಯೋಗದ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ರು.
ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿ
ಈ ವೇಳೆ ಮಾತನಾಡಿದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ, ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿ, ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದ್ರು. ಬಾಲ ಕಾರ್ಮಿಕತೆಗೆ ಒಳಗಾಗಿರುವ ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದ್ರು.
ಇದನ್ನು ಓದಿ : Raichur|ಏಕಾಏಕಿ ಮನೆಗಳಲ್ಲಿ ನೆಲ ಕುಸಿತ – ಗ್ರಾಮಸ್ಥರಲ್ಲಿ ಆತಂಕ

ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆಯನ್ನು ಹೆಚ್ಚಿಸಬೇಕು
ಇನ್ನು ಇದೇ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ಯಾರೇಜ್, ಟೋಲ್, ಕಾರ್ಖಾನೆ, ಹೋಟೆಲ್, ಅಂಗಡಿ ಮತ್ತು ಇತರ ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆಯನ್ನು ಹೆಚ್ಚಿಸಬೇಕು. ಇದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಿ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ತಿಪ್ಪೇಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ
ರಾಜ್ಯದಲ್ಲಿ ಬಾಲಕಾರ್ಮಿಕರನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಬಾಲ ಕಾರ್ಮಿಕರು ಕಡಿಮೆ ಆಗ್ತಾರಾ ಎಂಬುವುದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ತುಮಕೂರಲ್ಲಿ ಅದ್ದೂರಿ ಸಂವಿಧಾನ ದಿನಾಚರಣೆ ಸಂವಿಧಾನ ಶಿಲ್ಪಿಗೆ ಹೇಗಿತ್ತು ಗೊತ್ತಾ ಗೌರವ




