Actor Darshan : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿರೋ ಡಿ ಗ್ಯಾಂಗ್ ಟೀಂ ನೂರು ದಿನಗಳನ್ನು ಪೂರೈಸಿದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿರೋ ಡಿ ಗ್ಯಾಂಗ್ ಟೀಂ ನೂರು ದಿನಗಳನ್ನು ಪೂರೈಸಿದಿದ್ದಾರೆ. ಸಿನಿಮಾ ನಟರು ಸಾಮಾನ್ಯವಾಗಿ ತಮ್ಮ ಸಿನಿಮಾ 100 ದಿನ ಪೂರೈಸಿದ್ರೆ ದೊಡ್ಡ ಸಾಧನೆ, ತಮ್ಮ ನೆಚ್ಚಿನ ನಟ ನಟಿಯರ ಸಿನಿಮಾ 100 ದಿನ ಪೂರೈಸಿದ್ರೆ ಸಾಕು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ದರ್ಶನ್ 100 ದಿನ ಪೂರೈಸಿದ್ದು, ಅಭಿಮಾನಿಗಳಲ್ಲಿ ದುಃಖ ಮನೆ ಮಾಡಿದೆ.
ಜೈಲಿನಲ್ಲೆ 106 ದಿನ ಕಳೆದ ದರ್ಶನ್
ಸುಪ್ರೀಂಕೋರ್ಟ್ನಿಂದ ದರ್ಶನ್ ಜಾಮೀನು ರದ್ದುಗೊಂಡ ಬಳಿಕ ನಟ ದರ್ಶನ್ ಮತ್ತೆ ಜೈಲು ಸೇರಿದ್ದು, ನಟ ದರ್ಶನ್ ಎರಡನೇ ಬಾರಿಗೆ ಜೈಲು ಸೇರಿ ಸುಮಾರು 106 ದಿನಗಳನ್ನು ಕಳೆದಿದ್ದಾರೆ. ದರ್ಶನ್ಗೆ ಜೈಲಿನಲ್ಲಿ ಫುಲ್ ಟೈಟ್ ಸಿಸ್ಟಮ್ ಇರೋದ್ರಿಂದ ಹಾಗೂ ಜೈಲಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ದಚ್ಚು ಮೇಲೆ ಪೊಲೀಸರು ಕಣ್ಗಾವಲಿಟ್ಟಿದ್ದು, ಪ್ರತಿಯೊಂದು ಸವಲತ್ತಿಗೂ ದರ್ಶನ್ ಕೋರ್ಟ್ ಮೊರೆ ಹೋಗುವಂತಾಗಿದೆ.
ಜಾಮೀನಿನ ಮೇಲೆ ಹೊರಬಂದಿದ್ದ ದರ್ಶನ್
ಇನ್ನು ಈ ಹಿಂದೆ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ ಸುಮಾರು 131 ದಿನಗಳ ಕಾಲ ಜೈಲುವಾಸ ಅನುಭವಿಸಿ, ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ರು. 62 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಗೂ ಬಳ್ಳಾರಿ ಜೈಲಿನಲ್ಲಿ 70 ದಿನ ಡಿ ಗ್ಯಾಂಗ್ ಜೈಲುವಾಸ ಅನುಭವಿಸಿದ್ರು.
ಇದನ್ನು ನೋಡಿ : ತುಮಕೂರಿನ ಕೈ ಪಾಳಯದಲ್ಲಿ ಕಾವೇರುತ್ತಿದ್ಯಾ ಬಣ ಬಡಿದಾಟ- ಮಂತ್ರಿಪಟ್ಟಕ್ಕಾಗಿ ನಾಯಕರ ನಡುವೆ ಬಿಗ್ ಫೈಟ್?

ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ
ಈ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ದರ್ಶನ್ ಹಾಗೂ ಪವಿತ್ರಾಗೌಡ ಜೈಲುವಾಸ ಅನುಭವಿಸ್ತಾ ಇದ್ದು, ದರ್ಶನ್ ಪರಪ್ಪನ ಅಗ್ರಹಾರ ಕ್ವಾರೆಂಟೈನ್ ಸೆಲ್ನಲ್ಲಿದ್ದು, ಯಾವುದೇ ಸವಲತ್ತುಗಳು ಸಿಗದೇ ಜೈಲಿನಲ್ಲಿ ಇರಲಾಗದೇ, ನ್ಯಾಯಾಧೀಶರ ಮುಂದೆ ವಿಷ ಕೊಡಿ ಅಂತಾ ವಿಡಿಯೋ ಕಾನ್ಫರೆನ್ಸ್ನಲ್ಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅಲ್ದೇ ಕಳೆದ ಬಾರಿ ನಡೆದ ವಿಚಾರಣೆಯಲ್ಲೂ ಚಳಿ ಹೆಚ್ಚಾಗಿದೆ, ಬೆಡ್ ಶೀಟ್ ಕೊಡ್ತಿಲ್ಲ ಅಂತಾ ದೂರು ನೀಡಿದ್ರು ಎನ್ನಲಾಗಿದೆ. ಕೂಡಲೇ ಬೆಡ್ ಶೀಟ್ ಕೊಡಲು ಸೂಚಿಸಿದ ಕೋರ್ಟ್ ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಎನ್ನಲಾಗಿದೆ.
ದರ್ಶನ್ ಅಂಡ್ ಗ್ಯಾಂಗ್ಗೆ ಜೈಲೇ ಗತಿ
ಇನ್ನು ಎಲ್ಲಾ ತೊಂದ್ರೆ, ಕಷ್ಟಗಳನ್ನು ಅನುಭವಿಸ್ತಿರೋ ಡಿ ಗ್ಯಾಂಗ್ ಜೈಲಿನಲ್ಲಿ ನೂರು ದಿನಗಳನ್ನು ಪೂರೈಸಿದಿದ್ದು. ಡಿ ಗ್ಯಾಂಗ್ಗೆ ಸದ್ಯ ಜಾಮೀನು ಸಿಗುವ ಸಾಧ್ಯತೆ ಇಲ್ಲವಾಗಿದ್ದರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೂ ದರ್ಶನ್ ಅಂಡ್ ಗ್ಯಾಂಗ್ಗೆ ಜೈಲೇ ಗತಿ ಎನ್ನಲಾಗಿದೆ. ಇತ್ತ ದಿ ಡೆವಿಲ್ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು, ಜೈಲಿನಲ್ಲಿರೋ ದಚ್ಚು ಮಾತ್ರ ಡೆವಿಲ್ ಸಿನಿಮಾ ಪ್ರಮೋಷನ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Davanagere|ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಬಾಲಕ ಸೂಸೈಡ್




