Davanagere Suicide : ಬಾಲಕನೊರ್ವ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಬಾಲಕನೊರ್ವ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ದಾವಣಗೆರೆ ನಗರದ ಎಪಿಎಂಸಿ ಸಮೀಪದ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ. ಮೃತರನ್ನು ನಗರ ಸಮೀಪದ ಹಳೇ ಚಿಕ್ಕನಹಳ್ಳಿಯ (ಹರಳಯ್ಯ ನಗರ) ತರುಣ್ (16) ಎಂದು ಗುರುತಿಸಲಾಗಿದೆ.
ಇದನ್ನು ಓದಿ : Bengaluru|KSRTC ಬಸ್ – ಕ್ಯಾಂಟರ್ ನಡುವೆ ಡಿಕ್ಕಿ | 15ಕ್ಕೂ ಹೆಚ್ಚು ಜನರಿಗೆ ಗಾಯ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಬೆಂಗಳೂರಿನಿಂದ ಹುಬ್ಬಳ್ಳಿಗೆ ಚಲಿಸುವ ರೈಲಿಗೆ ಬೆಳಗಿನ ಜಾವ ಬಾಲಕ ಬಿದ್ದಿದ್ದು, ಬಾಲಕಕನ ದೇಹ ಒಂದು ಕಡೆ ಶಿರ ಒಂದು ಕಡೆ ಬಿದ್ದಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತದೇಹವನ್ನು ಶವಾಗಾರಕ್ಕೆ ರವಾನೆ
ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.
ಇದನ್ನು ನೋಡಿ : ಸರ್ಕಾರಿ ಆಸ್ಪತ್ರೆಲಿ ಶೌಚಾಲಯಕ್ಕೆ ಬೀಗ ವರದಿಗೆ ನಿಲ್ತಿದ್ದಂತೆ ಅಧಿಕಾರಿಗಳು ಅಲರ್ಟ್




