
TUMAKUTRU NEWS : ತುಮಕೂರು ಸ್ಮಾರ್ಟ್ ಸಿಟಿ ಅಂತ ಕರೆಸಿಕೊಂಡು ವರುಷಗಳೇ ಕಳೆಯುತ್ತಿದೆ. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯವೋ ಏನೋ..ಸ್ಮಾರ್ಟ್ ಸಿಟಿ ತುಮಕೂರಲ್ಲಿ ಸಮಸ್ಯೆಗಳ ಇಂದಿಗೂ ಕೊನೆ ಯಾಗ್ತಾ ಇಲ್ಲ. ಇತ್ತ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಒಗ್ಗೂಡಿ ಹಲವು ಪಾರ್ಕ್ಗಳ ನಿರ್ವಹಣೆಗೆ ಮುಂದಾಗಿತ್ತು. ಆದ್ರೆ ನಿರ್ವಹಣೆಯ ಕೊರತೆಯಿಂದಾಗಿ ಇಂದಿಗೂ ಅನೇಕ ಪಾರ್ಕ್ ಗಳು ಪಾಳುಬಿದ್ದ ಕೊಂಪೆಯಾಗುತ್ತಿವೆ. ಪಾರ್ಕ್ ಗಳ ಅಧ್ವಾನದ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಬಿತ್ತರ ಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಅನೇಕ ಪಾರ್ಕ್ ಗಳ ಸರಿಯಾದ ನಿರ್ವಹಣೆ ಇಲ್ಲದೆ ಸೊರುಗುತ್ತಿವೆ. ದೇಶ ಪ್ರೇಮಿ ವೀರ ಸಾವರ್ಕರ್ ಹೆಸರಿನ ಪಾರ್ಕ್ ಪಾಳು ಬಿದ್ದಿದ್ದು, ಗಿಡಿಗಂಟೆಗಳು ಬೆಳೆದು ಅನೈತಿಕ ಚಟುವಟಿ ಕೆಯ ತಾಣವಾಗ್ತಾ ಇದೆ ಅಂತ ಸಾರ್ವಜನಿಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿ , ಸ್ವಚ್ಛ ನಗರ ಅಂತಲೇ ಖ್ಯಾತಿ ಪಡೆದುಕೊಂಡಿರುವಂತಹ ಊರು ನಮ್ಮ ತುಮಕೂರು. ಆದರೆ, ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸಿಬ್ಬಂದಿಗಳ ಕುರುಡು ಜಾಣತನದಿಂದ ಸ್ವಚ್ಛ ನಗರವಾಗಬೇಕಿದ್ದ ತುಮಕೂರು ಅಸ್ವಚ್ಚತೆ ಕಡೆ ಸಾಗ್ತಾ ಇದೆ ಅನ್ನೋ ಪ್ರಶ್ನೆ ಮಾಡುತ್ತಿದೆ.
ತುಮಕೂರು ಮಹಾನಗರ ಪಾಲಿಕೆ ಯ ವ್ಯಾಪ್ತಿಗೆ ಒಳಪಡುವ ಕೆಲ ಪಾರ್ಕ್ ಗಳ ಸ್ಥಿತಿಯಂತೂ ಹೇಳ ತಿರದಾಗಿದೆ . ಇನ್ನು ತುಮಕೂರು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವ ಸೋಮೇಶ್ವರ ಪುರಂ ನಲ್ಲಿರುವ ವೀರ ಸಾವರ್ಕರ್ ಉದ್ಯಾನವನ ಸ್ವಚ್ಛತೆ ಇಲ್ಲದೆ ಸೊರಗುತ್ತಿದೆ.
ಹೌದು ವೀರ ಸಾವರ್ಕರ್ ಪಾರ್ಕ್ ನ ಮಕ್ಕಳ ಉದ್ಯಾನವನದಲ್ಲಿ ಅಸ್ವಚತೆ ಎದ್ದು ಕಾಣ್ತಾ ಇದೆ . ಪಾರ್ಕ್ ತುಂಬಾ ಅಸ್ವಚ್ಛತೆ ಇರುವುದರಿಂದ ಹಾಗೂ ಗಿಡಗಳು ಬೆಳೆದಿರುವುದರಿಂದ, ಸ್ಥಳೀಯರು ಓಡಾಡುವುದ ಕ್ಕೂ ಭಯ ಪಟ್ಟುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ . ಅದರೊಳಗೆ ವಿಷ ಜಂತುಗಳು ಸೇರಿರಬಹು ದು ಅಂತ ಜನ ಪಾರ್ಕ್ ಕಡೆಗೆ ಹೋಗೋದಕ್ಕೆ ಭಯಪಡುತ್ತಿದ್ದಾರಂತೆ.
ಇನ್ನು ಈ ಪಾರ್ಕ್ ನ ತುಂಬಾ ಗಿಡಗಂಟೆಗಳು ಬೆಳದು ನಿಂತಿರುವುದರಿಂದ ಪಾರ್ಕ್ ಕಡೆ ಯಾರು ಕೂಡ ಮುಖಾ ಮಾಡಿ ನೋಡುತ್ತಿಲ್ಲವಂತೆ. ಇಲ್ಲಿ ಪ್ರತಿನಿತ್ಯ ಓಡಾಡುವ ಜನರು ಜೀವ ಭಯದಲ್ಲಿಯೇ ಓಡಾಡು ವಂತಾಗಿದೆ. ಅಲ್ಲದೆ ಎಲ್ಲೆಂದರಲ್ಲಿ ಗುಟ್ಕಾ , ಮದ್ಯದ ಪ್ಯಾಕೆಟ್ ಗಳು ಬಿದ್ದಿರುವುದರಿಂದ ಪಾರ್ಕಿಗೆ ಬಂದ ವರು ಮುಜುಗರಕ್ಕೊಳಗಾಗುವಂತಾಗಿದೆ.




