
TUMAKURU : ತುಮಕೂರಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ವೇಳೆ ತುಮಕೂರಿನ ವಿಸರ್ಜನೆಗೆ ಘಟಾನುಘಟಿ ನಾಯಕರು ಆಗಮಿಸಿದ್ದರು. ಅದರಲ್ಲೂ ಫೈರ್ ಬ್ಯ್ರಾಂಡ್ ಎಂದೇ ಖ್ಯಾತಿ ಗಳಿಸಿರುವ ಬಸನಗೌಡ ಪಾಟೀಲ್ ಎಂಟ್ರಿ ಕೊಟ್ಟಿದ್ದರು. ಲಕ್ಷಾಂತರ ಅಭಿಮಾನಿಗಳು ಜೈಕಾರ ಕೂಗಿ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಬಸನಗೌಡ ಪಾಟೀಲ್ ಧರ್ಮದ ಕಿಚ್ಚು ಹಚ್ಚಿದ್ರು. ಅತ್ತ ಕೊಪ್ಪಳದಲ್ಲಿಯೂ ಮಾತನಾಡುವ ವೇಳೆ ಆ ಚಾಮುಂಡೇಶ್ವರಿಗೆ ಪೂಜೆ ಮಾಡಲು ದಲಿತ ಮಹಿಳೆಗೂ ಕೂಡ ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಎಲ್ಲೆಡೆ ವೈರಲ್ ಆಗಿ, ದಲಿತಪರ ಸಂಘಟನೆಗಳು ಯತ್ನಾಳ್ ವಿರುದ್ಧ ಹರಿಹಾಯ್ದಿದ್ದರು. ಕೂಡಲೇ ಪಕ್ಷದಿಂದ ಯತ್ನಾಳ್ ರನ್ನು ಉಚ್ಛಾಟನೆ ಮಾಡಿ ಎಂಬ ಆಕ್ರೋಶದ ಕೂಗು ಹೆಚ್ಚಾಗಿತ್ತು. ಇತ್ತ ತುಮಕೂರಿನಲ್ಲಿಯೇ ಎಫ್ ಐಆರ್ ದಾಖಲಿಸಿದರು. ಇದೀಗ ಟೌನ್ ವೃತ್ತದ ಬಳಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಅಲ್ಪಸಂಖ್ಯಾತ ಒಕ್ಕೂಟಗಳಿಂದ ಪ್ರತಿಭಟನೆ ನಡೆಸಿ ಯತ್ನಾಳ ಗಡಿಪಾರು ಮಾಡುವಂತೆ ಆಕ್ರೋಶ ಹೊರ ಹಾಕಿದರು.
ತುಮಕೂರಿನಲ್ಲಿಯೂ ಯತ್ನಾಳ ವಿರುದ್ಧ ದಲಿತಪರ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ಕಿಚ್ಚು ಕೊಂಚ ಜೋರಾಗಿಯೇ ಇದೆ. ಒಬ್ಬ ದಲಿತ ಹೆಣ್ಣು ಮಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಯತ್ನಾಳ್ ರನ್ನು ಕೂಡಲೇ ಗಡಿಪಾರು ಮಾಡುವಂತೆ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಇನ್ನು ದಲಿತ ಮಹಿಳೆ ಹಾಗೂ ಅಲ್ಪಸಂಖ್ಯಾತ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿದ್ರು. ಅವಿವೇಕಿ ಯತ್ನಾಳ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಜೊತೆಗೆ ಅವರ ಮೇಲೆ ಎಫ್ ಐಆರ್ ಮಾಡಿದರೆ ಸಾಲದು, ಅವರನ್ನು ಗಡಿಪಾರು ಮಾಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.
ಇನ್ನು ಪ್ರತಿಭಟನೆಯಲ್ಲಿ ಕೋಮುಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಯತ್ನಾಳ್ ನ ಕೇವಲ ಬಂಧಿಸಿದರೇ ಸಾಲದು. ಅತನನ್ನು ಗಡಿಪಾರು ಮಾಡಲೇಬೇಕು ಎಂದು ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದ್ರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಶಾಸಕ ರಫೀಕ ಅಹ್ಮದ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಹಾಜರಿದ್ದರು.




