Tumakuru News : ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಚಿರತೆಯ ಕಾಟ ಮತ್ತೇ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಚಿರತೆಯ ಕಾಟ ಮತ್ತೇ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಪನಹಳ್ಳಿ ಗ್ರಾಮದಲ್ಲಿ ಚಿರತೆ ಹಾಗೂ ಅದರ ಮರಿಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಮಿತಿಮೀರಿದ ಚಿರತೆ ಕಾಟ
ಕಳೆದ ಮೂರು ತಿಂಗಳಿನಿಂದ ಸೋಪನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಕಾಟ ಮಿತಿಮೀರಿದ್ದು, ಈಗಾಗಲೇ ನಾಲ್ಕು ಮೇಕೆ ಹಾಗೂ ಪಶುವಿನ ಮೇಲೆ ಚಿರತೆ ದಾಳಿ ಮಾಡಿತ್ತು. ಈ ಬಗ್ಗೆ ಸುದ್ದಿ ಬಿತ್ತರವಾದ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಬೋನ್ಗಳನ್ನ ಇಟ್ಟಿದ್ದರು. ಆದರೆ ಚಿರತೆ ಕಾಣಿಸಿದ ಪರಿಣಾಮ ಬೋನ್ ಗಳನ್ನ ಬೇರೆಡೆ ಸ್ಥಳಾಂತರಿಸಿದ್ರು. ಆದ್ರೆ ಈಗ ಮತ್ತೇ ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಶುರುವಾಗಿದೆ.

ಸೋಪನಹಳ್ಳಿಯಲ್ಲಿ ಚಿರತೆ ಮತ್ತು ಮರಿಗಳು ಪ್ರತ್ಯಕ್ಷ
ಇನ್ನು ತೋಟದ ಮನೆಯಿಂದ ಮಹಿಳೆಯೊಬ್ಬರು ಗ್ರಾಮಕ್ಕೆ ಬರುವಾಗ ಚಿರತೆಯು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿದೆ, ಅಲ್ದೇ ಅದೇ ಗ್ರಾಮದ ರವಿಕುಮಾರ್ ಎಂಬುವರು ತೋಟಕ್ಕೆ ವಾಕಿಂಗ್ ಬಂದಾಗ ಚಿರತೆಯು ಮರದ ಮೇಲೆ ಕಾಣಿಸಿಕೊಂಡಿದ್ದು, ಮೊಬೈಲ್ ನಲ್ಲಿ ಪೋಟೊ ಕ್ಲಿಕ್ಕಿಸಿದ್ದಾರೆ.
ಇದನ್ನು ಓದಿ : ಶ್ರೀರಾಮನ ಸನ್ನಿಧಿಯಲ್ಲಿ ರಾರಾಜಿಸಿದ ಧರ್ಮಧ್ವಜ..!
ಇನ್ನು ಸೋಪನಹಳ್ಳಿ ಗ್ರಾಮ ಸಂಪೂರ್ಣವಾಗಿ ಕೃಷಿಗೆ ಅವಲಂಬಿತವಾಗಿದ್ದು, ರೈತರು ತೋಟಗಳಿಗೆ ನೀರು ಬೀಡಲು ಹಗಲು ರಾತ್ರಿ ತೆರಳಬೇಕಾದ ಪರಿಸ್ಥಿತಿಯಿದ್ದು, ಇದೀಗ ಮತ್ತೇ ಗ್ರಾಮದ ಸುತ್ತಮುತ್ತ ಚಿರತೆ ಹಾಗೂ ಮರಿಗಳು ಪ್ರತ್ಯಕ್ಷವಾಗಿದ್ದು, ತೋಟಗಳಲ್ಲಿ ಎಲ್ಲಿ ಯಾವಾಗ ಪ್ರತ್ಯಕ್ಷವಾಗಿ ದಾಳಿ ಮಾಡುತ್ತೋ ಗೊತ್ತಿಲ್ಲ. ಅಲ್ದೇ ಇದ್ರಿಂಧ ಮಹಿಳೆಯರು ಮಕ್ಕಳು ಓಡಾಡಲು ಭಯಪಡುವಂತಾಗಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ರು
ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹ
ಇನ್ನು ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ತಮ್ಮ ಜಮೀನುಗಳಿಗೆ ತೆರಳಲು ರೈತರಲ್ಲಿ ಆತಂಕ ಹೆಚ್ಚಾಗಿದೆ. ಅಲ್ದೇ ಪಕ್ಕದಲ್ಲೇ ತುಮಕೂರು ಯುನಿವರ್ಸಿಟಿ ಕ್ಯಾಂಪಸ್ ಇದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಹೀಗಾಗಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಚಿರತೆಯನ್ನ ಸೆರೆ ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡುವಂತೆ ಆಗ್ರಹಿಸಿದ್ದಾರೆ.

ಇದನ್ನು ನೋಡಿ : ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?




