Lokayukta Raid : ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದೆ. ರಾಜ್ಯದ 10 ಕಡೆ ದಾಳಿ ನಡೆಸಿದೆ.

Lokayukta Raid : ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದೆ. ರಾಜ್ಯದ 10 ಕಡೆ ದಾಳಿ ನಡೆಸಿದೆ.
ಎಲ್ಲೆಲ್ಲಿ ದಾಳಿ ನಡೆದಿದೆ?
ಲೋಕಾಯುಕ್ತ ತಂಡಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸರ್ಕಾರದ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯ ನಡೆದಿದೆ.
ಬೆಂಗಳೂರು
RTO ಸೂಪರಿಂಟೆಂಡೆಂಟ್ – ಕುಮಾರಸ್ವಾಮಿ
ಮಂಡ್ಯ
ನಗರ ಪಾಲಿಕೆ CAO – ಪುಟ್ಟಸ್ವಾಮಿ
ಬೀದರ್
ಕೃಷ್ಣಾ ಮೇಲ್ದಂಡೆ ಯೋಜನೆ ಮುಖೇನೆ ಇಂಜಿನಿಯರ್ – ಪ್ರೇಮ್ ಸಿಂಗ್
ಮೈಸೂರು
ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ – ರಾಮಸ್ವಾಮಿ ಸಿ
ಮಡಿಕೇರಿ ವಿಭಾಗ, PWD ಸ.ಅ.ಇಂಜಿನಿಯರ್ – ಗಿರೀಶ್ ಡಿ.ಎಂ
ಇದನ್ನು ಓದಿ : Mysuru|ಡೆವಿಲ್ ಸಿನಿಮಾದ ಪೋಸ್ಟರ್ ಹಿಡಿದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಚಾರ

ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯ ಅಸ್ಸೋ. ಪ್ರಾಧ್ಯಾಪಕ – ಸುಭಾಶ್ ಚಂದ್ರ
ಪ್ರಾ. ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ – ಸತೀಶ್
ಶಿವಮೊಗ್ಗ
SIMS ಮೆಡಿಕಲ್ ಕಾಲೇಜ್ FDA – ಲಕ್ಷ್ಮೀಪತಿ ಸಿ.ಎನ್
ದಾವಣಗೆರೆ
APMC ಸಹಾಯಕ ನಿರ್ದೇಶಕ – ಪ್ರಭು ಜೆ
ದಾಳಿ ಹಿನ್ನೆಲೆ
ಲೋಕಾಯುಕ್ತಕ್ಕೆ ಬಂದಿದ್ದ ಸಂಪತ್ತಿನ ಅತಿರೇಕ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿರುವುದು ತಿಳಿದುಬಂದಿದೆ. ಅಧಿಕಾರಿಗಳು ಮನೆಗಳು–ಕಚೇರಿಗಳಲ್ಲಿ ನಗದು, ಆಸ್ತಿ ದಾಖಲೆಗಳು, ಬ್ಯಾಂಕ್ ಸ್ಟೇಟ್ಮೆಂಟ್ಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದಾಳಿ ಕುರಿತ ಹೆಚ್ಚಿನ ವಿವರಗಳು ಹೊರಬರಬೇಕಿದೆ. ಮುಂದಿನ ಗಂಟೆಗಳಲ್ಲಿ ಇನ್ನಷ್ಟು ಬೆಳವಣಿಗೆ ಸಾಧ್ಯ.
ಇದನ್ನು ನೋಡಿ : ಆಕಸ್ಮಿಕ ಬೆಂಕಿಗೆ ಗುಡಿಸಲು ಸುಟ್ಟು ಭಸ್ಮ – ಹಣ,ದಾಖಲೆ ಪತ್ರಗಳು ಎಲ್ಲವೂ ಸುಟ್ಟು ಕರಕಲು




