Belagavi News : ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಮದುವೆಯಾಗಿ ಮೂರು ಮಕ್ಕಳಿರುವ ತಂದೆಯೊಂದಿಗೆ 19ರ ಯುವತಿ ಪರಾರಿಯಾಗಿದ್ದಾಳೆ.

Belagavi News : ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಮದುವೆಯಾಗಿ ಮೂರು ಮಕ್ಕಳಿರುವ ತಂದೆಯೊಂದಿಗೆ 19ರ ಯುವತಿ ಪರಾರಿಯಾಗಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ಜರುಗಿದೆ.
ಇದನ್ನು ಓದಿ : BBK 12|ಬಿಗ್ ಬಾಸ್ನಿಂದ ರಿಷಾ ಗೌಡ ಔಟ್!
ಮೂರು ಮಕ್ಕಳ ತಂದೆ ಜೊತೆ ಎಸ್ಕೇಪ್
ಕಾಲೇಜಿಗೆ ಹೋದ ಯುವತಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಆತಂಕಗೊಂಡು ಹುಡುಕಾಟ ನಡೆಸಿದ್ಧಾರೆ. ಬಳಿಕ, ತಮ್ಮ ಮಗಳು 3 ಮಕ್ಕಳ ತಂದೆ ಸುರೇಶ್ ಹುಲ್ಲೇನ್ನವರ್ ಎನ್ನುವ ವ್ಯಕ್ತಿಯೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿ, ಸುರೇಶ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲು ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಲೀಸರಿಂದ ತನಿಖೆ ಆರಂಭ
ಸುರೇಶ್ ವಿವಾಹಿತನಾಗಿದ್ದು, ಮೂವರು ಮಕ್ಕಳ ತಂದೆ ಎನ್ನುವುದು ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ಆರಂಭವಾಗಿದ್ದು, ಯುವತಿ ಹಾಗೂ ಸುರೇಶ್ ಅವರ ಬಗ್ಗೆ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನು ನೋಡಿ : ನ.28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರೋಡ್ ಶೋ ರದ್ದು




