BBK : ಬಿಗ್ಬಾಸ್ (Bigg Boss) ಮನೆಯಿಂದ ರಿಷಾ ಗೌಡ (Risha Gowda) ಅವರು ಆಟ ಮುಗಿಸಿ ಹೊರ ಬಂದಿದ್ದಾರೆ.

BBK : ಬಿಗ್ಬಾಸ್ ಕನ್ನಡ ಸೀಸನ್ 12ರ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ ರಿಷಾ ಗೌಡ (Risha Gowda) ಅವರ ಪಯಣ ನಿನ್ನೆ ಅಂತ್ಯಗೊಂಡಿದೆ. ‘ಸಂಡೇ ವಿತ್ ಬಾದ್ಶಾ ಸುದೀಪ್’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ರಿಷಾ ಎಲಿಮಿನೇಟ್ ಎಂದಾಗಿ ಘೋಷಣೆ ಮಾಡಿದರು.
ವೈಲ್ಡ್ ಕಾರ್ಡ್ ಎಂಟ್ರಿಯಿಂದ ಅಬ್ಬರದ ಆರಂಭ
ರಿಷಾ ಗೌಡ ಮನೆಗೆ ಪ್ರವೇಶಿಸುತ್ತಲೇ ತಾವು ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ತೋರಿಸಿದ್ದರು. ಮೊದಲ ವಾರದಲ್ಲೇ ಗಿಲ್ಲಿ ಹಾಗೂ ಚಂದ್ರಪ್ರಭ ಜೊತೆಯಲ್ಲಿ ತಮಾಷೆ, ಸಂಭಾಷಣೆ ಮತ್ತು ಚುಟುಕು ಕಲಹಗಳಲ್ಲಿ ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಆದರೆ ವಾರಗಳು ಕಳೆಯುತ್ತಿದ್ದಂತೆ, ಸಣ್ಣಪುಟ್ಟ ವಿಚಾರಕ್ಕೂ ಜೋರಾಗಿ ಪ್ರತಿಕ್ರಿಯಿಸುವ ಸ್ವಭಾವವೇ ಅವರ ವಿರುದ್ಧವಾಗಿ ಕೆಲಸ ಮಾಡಿತು.
ಇದನ್ನು ಓದಿ : BBK 12|ಮತ್ತೆ ಜಗಳಕ್ಕೆ ಇಳಿದ ಅಶ್ವಿನಿ ಗೌಡ

ಬಕೆಟ್ ಗಲಾಟೆ – ಎಲೆಮಿನೇಶನ್ಗೆ ಕಾರಣವಾದ ಘಟನೆ
ರಿಷಾ ಮತ್ತು ಗಿಲ್ಲಿ ನಡುವೆ ನಡೆದ ಬಕೆಟ್ ವಿವಾದ ಜಗಳಕ್ಕೆ ತಿರುಗಿ ದೊಡ್ಡ ಗಲಾಟೆಯಾಗಿ ಬೆಳವಣಿಗೆಯಾಯಿತು. ಬಕೆಟ್ ಕೊಡಲಿಲ್ಲವೆಂಬ ಕಾರಣಕ್ಕೆ ರಿಷಾ, ಗಿಲ್ಲಿಯ ಬಟ್ಟೆಗಳನ್ನು ಬಾತ್ರೂಮ್ ಬಳಿ ತಂದು ಹಾಕಿದ್ದರು. ಇದಕ್ಕೆ ಗಿಲ್ಲಿ ಸಿಟ್ಟಿಗೆದ್ದು ಪ್ರತಿಕ್ರಿಯಿಸಿದಾಗ, ರಿಷಾ ಗಿಲ್ಲಿಗೆ ಹೊಡೆದ ಘಟನೆ ಸ್ಪರ್ಧಿಗಳಷ್ಟೇ ಅಲ್ಲ ಪ್ರೇಕ್ಷಕರಲ್ಲೂ ಆಕ್ರೋಶ ಮೂಡಿಸಿತ್ತು. ಆಗಲೇ ಅವರನ್ನು ಮನೆಯಿಂದ ಹೊರಹಾಕಬೇಕೆಂಬ ಬೇಡಿಕೆ ಹೆಚ್ಚಾಗಿತ್ತು.
ನಾಮಿನೇಷನ್ ಮತ್ತು ಸೇಫ್ ಪಟ್ಟಿಗೆ ಸೇರ್ಪಡೆ
ಈ ವಾರ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್ನಲ್ಲಿ ರಕ್ಷಿತಾ, ಸ್ಪಂದನಾ ಮತ್ತು ಅಭಿಷೇಕ್ ಸೇಫ್ ಆಗಿದ್ದರು. ನಿನ್ನೆ ಸುದೀಪ್, ಮೊದಲಿಗೆ ಮಾಳು ಮತ್ತು ಸೂರಜ್ ಅವರನ್ನು ಸೇಫ್ ಪಟ್ಟಿಗೆ ಸೇರಿಸಿದರು. ನಂತರ ನೀಡಿದ ಟಾಸ್ಕ್ನಲ್ಲಿ ಕೈ ಬಳಸದೆಯೇ ಕೇಕ್ ತಿನ್ನುವ ಚಾಲೆಂಜ್ ಮೂಲಕ ಮುಂದಿನ ಸೇಫ್ ಸ್ಪರ್ಧಿಗಳನ್ನು ಪ್ರಕಟಿಸಿದರು. ಈ ಹಂತದಲ್ಲಿ ಅಶ್ವಿನಿ ಸೇಫ್ ಆದರು, ನಂತರ ಜಾಹ್ನವಿ ಸೇಫ್ ಆಗಿದರು.
ಧ್ರುವಂತ್ ಡೇಂಜರ್ ಜೋನ್
ಡೇಂಜರ್ ಜೋನ್ನಲ್ಲಿ ರಿಷಾ ಹಾಗೂ ಧ್ರುವಂತ್ ಉಳಿದಿದ್ದರು. ಪ್ರೇಕ್ಷಕರ ಮತದ ಆಧಾರದ ಮೇಲೆ ಧ್ರುವಂತ್ ಸೇಫ್ ಆಗಿ, ರಿಷಾ ಗೌಡ ಮನೆಯಿಓಂದ ಔಟ್ ಆಗಿದ್ದಾರೆ.

ಇದನ್ನು ನೋಡಿ : ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಬೆಚ್ಚಿಬಿದ್ದ ಜನತೆ




