BBK : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರು ಜನಪ್ರಿಯತೆಗಿಂತ ಹೆಚ್ಚಾಗಿ ಕುಖ್ಯಾತಿ ಪಡೆದಿದ್ದೇ ಹೆಚ್ಚು.

BBK : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಅಶ್ವಿನಿ ಗೌಡ ಅವರು ಜನಪ್ರಿಯತೆಗಿಂತ ಹೆಚ್ಚಾಗಿ ಕುಖ್ಯಾತಿ ಪಡೆದಿದ್ದೇ ಹೆಚ್ಚು. ಅಶ್ವಿನಿ ಗೌಡ ಅವರು ಪ್ರತಿ ವಾರವೂ ಒಂದಲ್ಲೊಂದು ವಿಚಾರದಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ.
ಇದನ್ನು ಓದಿ : Pavagada|ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಈ ವಾರ ಮತ್ತೆ ರೋಷದೊಂದಿಗೆ ಆರಂಭ
ಕಳೆದ ವಾರ ತೋರಿದ ಮಾಡಿದ ವರ್ತನೆಗೆ ಸುದೀಪ್ ಕಡೆಯಿಂದ ತೀವ್ರ ತರಾಟೆಗೆ ಗುರಿಯಾಗಬೇಕಾಯಿತು. ಪ್ರೇಕ್ಷಕರಿಂದಲೂ ಏಕಕಾಲದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಆ ಎಚ್ಚರಿಕೆಯಿಂದ ಅವರು ಬದಲಾಗುವ ನಿರೀಕ್ಷೆಯಿದ್ದರೂ, ಈ ವಾರವೂ ಅಶ್ವಿನಿ ರೋಷಭರಿತವಾಗಿ ಆರಂಭಿಸಿದ್ದಾರೆ.
ಅಶ್ವಿನಿಯನ್ನು ನಾಮಿನೇಟ್ ಮಾಡಿದ ಧ್ರುವಂತ್
ಈಗ ಈ ವಾರ ಮತ್ತೆ ರೋಷದೊಂದಿಗೆ ಆರಂಭಿಸಿದ್ದಾರೆ. ನಾಮಿನೇಟ್ ಮಾಡಿದ ಧ್ರುವಂತ್ ವಿರುದ್ಧ ಅಶ್ವಿನಿ ಸಿಟ್ಟಾಗಿದ್ದಾರೆ. ಮನೆಯೊಳಗಿನ ಸ್ಪರ್ಧಿಗಳ ನಡುವೆ ಈಗಾಗಲೇ ತೀವ್ರತೆ ಹೆಚ್ಚಿರುವ ಸಂದರ್ಭದಲ್ಲಿ, ಅಶ್ವಿನಿ–ಧ್ರುವಂತ್ ತಕರಾರು ಮತ್ತಷ್ಟು ಡ್ರಾಮಾಗೆ ವೇದಿಕೆ ಸಿದ್ಧಪಡಿಸಿದೆ. ಪ್ರೇಕ್ಷಕರು ಈ ವಿವಾದ ಯಾವ ದಿಕ್ಕಿಗೆ ಸಾಗುತ್ತದೆ ಎಂಬ ಕುತೂಹಲದಲ್ಲಿ ಕಾದಿದ್ದಾರೆ.
ಇದನ್ನು ನೋಡಿ : ಶಿಡ್ಲಘಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರುವವರಿಗೆ ಉಚಿತ ಪೆಟ್ರೋಲ್, ಮುಗಿಬಿದ್ದ ಜನ




