Political News : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿದೆ. ಒಂದ್ಕಡೆ ಸಂಪುಟ ಪುನಾರಚನೆಗೆ ಸಿಎಂ ಸರ್ಕಸ್ ಪಡ್ತಾ ಇದ್ದು ಡೆಲ್ಲಿ ಪ್ರವಾಸ ಕೈಗೊಂಡು ವಾಪಸ್ ಆಗಿದ್ದಾರೆ.

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿದೆ. ಒಂದ್ಕಡೆ ಸಂಪುಟ ಪುನಾರಚನೆಗೆ ಸಿಎಂ ಸರ್ಕಸ್ ಪಡ್ತಾ ಇದ್ದು ಡೆಲ್ಲಿ ಪ್ರವಾಸ ಕೈಗೊಂಡು ವಾಪಸ್ ಆಗಿದ್ದಾರೆ. ಇತ್ತ ಸಿಎಂ ಬೆಂಗಳೂರಿಗೆ ವಾಪಸ್ ಆಗ್ತಾ ಇದ್ದಂತೆ ಡಿಸಿಎಂ ಡಿಕೆಶಿ ಟೀಂ ಡಿಕೆಶಿಗೆ ಸಿಎಂ ಪಟ್ಟ ನೀಡುವಂತೆ ಆಗ್ರಹಿಸಿ ಡಿಕೆ ಟೀಂ ಡೆಲ್ಲಿ ಪ್ರಯಾಣ ಕೈಗೊಂಡಿದ್ದಾರೆ.
ಸಿಎಂ ಖುರ್ಚಿಗಾಗಿ ಸಿದ್ದು ಹಾಗೂ ಡಿಕೆಶಿ ಬಣದ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಇತ್ತ ಸಿಎಂ ಕುರ್ಚಿ ಗುದ್ದಾಟದ ನಡುವೆ ಮಂತ್ರಿಗಿರಿಗಾಗಿ ಕೆಲ ಶಾಸಕರು ಲಾಬಿ ನಡೆಸುತ್ತಿದ್ದು, ಸದ್ದಿಲ್ಲದೇ ಕಾಂಗ್ರೆಸ್ ಶಾಸಕರು ಡೆಲ್ಲಿ ಪ್ರಯಾಣ ಕೈಗೊಂಡಿದ್ದಾರೆ.
ಒಂದ್ಕಡೆ ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟಕ್ಕೆ ಡಿಕೆ ಟೀಂ ಡೆಲ್ಲಿ ಟೂರ್
ಹಾಸನ ಉಸ್ತುವಾರಿ ಹಾಗೂ ಸಹಕಾರಿ ಖಾತೆಯನ್ನು ಕಳೆದುಕೊಂಡಿರೋ ಕೆ.ಎನ್ ರಾಜಣ್ಣ ಮತ್ತೆ ಸಿದ್ದರಾಮಯ್ಯ ಅವರ ಸಂಪುಟ ಸೇರಲು ಸರ್ಕಸ್ ನಡೆಸ್ತಿದ್ದಾರೆ. ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳುವ ಮುನ್ನ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂರನ್ನ ರಾಜಣ್ಣ ಭೇಟಿಯಾಗಿ ತಮ್ಮನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು.
ಅಲ್ದೇ ಸಿಎಂ ಆಪ್ತರಾಗಿರೋ ರಾಜಣ್ಣ ಮತ್ತೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ದೇ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸದ ವೇಳೆ ಹೈಕಮಾಂಡ್ ಬಳಿ ರಾಜಣ್ಣಗೆ ಮತ್ತೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಅಪ್ಪನಿಗೆ ಮತ್ತೆ ಸಚಿವ ಸ್ಥಾನ ಕೊಡಿಸಲು ರಾಜಣ್ಣ ಪುತ್ರ ರಾಜೇಂದ್ರ ರಾಜಣ್ಣ ಅಖಾಡಕ್ಕೆ ಇಳಿದಿದ್ದಾರೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 22-11-2025
ಅಪ್ಪನಿಗೆ ಮತ್ತೆ ಮಂತ್ರಿಗಿರಿ ಕೊಡಿಸಲು ಡೆಲ್ಲಿಗೆ ಹಾರಿದ ರಾಜೇಂದ್ರ
ಅಪ್ಪ ರಾಜಣ್ಣ ಪರವಾಗಿ ಮಗ ರಾಜೇಂದ್ರ ರಾಜಣ್ಣ ಅಖಾಡಕ್ಕೆ ಇಳಿದಿದ್ದು, ತಮ್ಮ ತಂದೆಗೆ ಮತ್ತೆ ಸಚಿವ ನೀಡುವಂತೆ ಆಗ್ರಹಿಸಿ ನಿನ್ನೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಹೈಕಮಾಂಡ್ನನ್ನು ಭೇಟಿಯಾಗಿ ತಮ್ಮ ತಂದೆಗೆ ಕ್ಯಾಬಿನೇಟ್ನಲ್ಲಿ ಸೇರ್ಪಡೆ ಮಾಡುವಂತೆ ಒತ್ತಡ ಹೇರಲಿದ್ದಾರೆ.
ದೆಹಲಿಗೆ ಹೋಗುವ ಮುನ್ನ ಮಾತನಾಡಿದ ರಾಜೇಂದ್ರ ರಾಜಣ್ಣ, ಸಿಎಂ ಬದಲಾವಣೆ ಪ್ರಸ್ತಾಪ ಸದ್ಯ ಕಾಣಿಸ್ತಾ ಇಲ್ಲ. ನಮ್ಮ ತಂದೆಗೆ ಮತ್ತೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸ್ತೀನಿ ಅಂತಾ ಹೇಳಿದ್ರು.
ಯಾರಿಗೆ ಸಚಿವ ಸ್ಥಾನ ಸಿಗುತ್ತೆ..?
ಒಟ್ನಲ್ಲಿ ದೆಹಲಿಯು ರಾಜ್ಯ ರಾಜಕಾರಣದ ಹೆಡ್ ಕ್ವಾಟರ್ ಆಗಿದ್ದು, ಕಾಂಗ್ರೆಸ್ ನಾಯಕರು ಬ್ಯಾಕ್ ಟು ಬ್ಯಾಕ್ ಡೆಲ್ಲಿ ಪ್ರವಾಸ ಕೈಗೊಳ್ತಾ ಇದ್ದಾರೆ. ಕೆಲ ಶಾಸಕರು ಸಚಿವ ಸ್ಥಾನ ಲಾಬಿಗೆ ಡೆಲ್ಲಿ ಪ್ರವಾಸ ಕೈಗೊಂಡ್ರೆ, ಇನ್ನು ಕೆಲವರು ಸಿಎಂ ಪರವಾಗಿ ಡೆಲ್ಲಿಗೆ ಹೋಗ್ತಾ ಇದ್ದಾರೆ.
ಈ ಮಧ್ಯೆ ಕೆಲ ನಾಯಕರು ನಮಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಡೆಲ್ಲಿ ದಂಡಯಾತ್ರೆ ಕೈಗೊಳ್ಳುತ್ತಾ ಇದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಹಾಗೂ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಹಾಗೂ ಸಿಎಂ ಆಗಿ ಯಾರು ಇರ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನು ನೋಡಿ : MADHUGIRI | ಹಾಡಹಗಲೇ ಚಾಕು ಇರಿದು ಕೊ*ಗೆ ಯತ್ನ – ಏಕಾಏಕಿ ಹಲ್ಲೆಗೆ ಮುಂದಾಗಿದ್ದೇಕೆ




