Director S. S. Rajamouli : ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ನಿರ್ದೇಶಕ ರಾಜಮೌಳಿ ವಿರುದ್ಧ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಹೊಸ ಚಿತ್ರ ‘ವಾರಣಾಸಿ’ ಈಗಾಗಲೇ ಭರ್ಜರಿ ಶೂಟಿಂಗ್ ಹಂತವನ್ನು ಮುಗಿಸುತ್ತಿದ್ದು, ನಿರ್ದೇಶಕರ ಮೇಲೆಯೇ ವಿವಾದ ಸಿಡಿದೆದ್ದಿದೆ. ನಟ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ ಈ ಸಿನಿಮಾಗೆ ಈಗಾಗಲೇ 60 ದಿನಗಳ ಶೂಟಿಂಗ್ ಕಂಪ್ಲೀಟ್ ಆಗಿದೆ.
ಆದರೆ, ಇತ್ತೀಚೆಗೆ ನಡೆಸಿದ ಫಸ್ಟ್-ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜಮೌಳಿ ನೀಡಿದ ಹೇಳಿಕೆ ಇದೀಗ ಅವರ ವಿರುದ್ಧ ಕಾನೂನು ದೂರು ದಾಖಲಾಗುವಂತೆ ಮಾಡಿದೆ.
ರಾಜಮೌಳಿ ವಿರುದ್ಧ ಪೊಲೀಸ್ ದೂರು
ರಾಷ್ಟ್ರೀಯ ವಾನರ ಸೇನೇ ಎಂಬ ಸಂಘಟನೆ ರಾಜಮೌಳಿ ಅವರ ಹೇಳಿಕೆ ಹಿಂದುಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ಹೈದರಾಬಾದ್ನ ಸರೂರ್ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಿರ್ದೇಶಕನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಏನಿದು ವಿವಾದ?
ಈಚೆಗೆ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ʻವಾರಣಾಸಿʼ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಲಾಗಿತ್ತು. ಅದಕ್ಕಾಗಿ ಗ್ರ್ಯಾಂಡ್ ಇವೆಂಟ್ ಮಾಡಲಾಗಿತ್ತು. ಈ ವೇಳೆ ಒಂದಷ್ಟು ಟೆಕ್ನಿಕಲ್ ಸಮಸ್ಯೆಗಳು ನಡೆದವು. ಆ ಬಗ್ಗೆ ಮಾತನಾಡಿದ್ದ ರಾಜಮೌಳಿ, “ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ. ಆದರೆ ನನ್ನ ತಂದೆ ಹನುಮಂತ ಇದ್ದಾನೆ, ಅವನು ಯಾವುದೇ ತೊಂದರೆ ಇಲ್ಲದೇ ಎಲ್ಲವನ್ನು ನಡೆಸಿಕೊಡುತ್ತಾನೆ ಎಂದಿದ್ದರು. ಆಗ ನನಗೆ ತಕ್ಷಣವೇ ಕೋಪ ಬಂದಿತ್ತು. ಈ ರೀತಿಯೇ ನಡೆಸಿಕೊಡುವುದು” ಎಂದು ಹೇಳಿದ್ದರು.
ಇದನ್ನು ಓದಿ : Gold Price Today : ಗ್ರಾಹಕರಿಗೆ ಚಿನ್ನದಂತ ಸುದ್ದಿ – ಚಿನ್ನದ ದರದಲ್ಲಿ ಇಳಿಕೆ
ದೇವರನ್ನು ದೂಷಿಸಿದ್ದು ಸರಿಯೇ?
ನಂತರ ಮಾತು ಮುಂದುವರಿಸಿದ್ದ ಅವರು, “ನನ್ನ ಪತ್ನಿ ರಮಾ ಅವರು ಆಂಜನೇಯನ ದೊಡ್ಡ ಭಕ್ತೆ. ಒಮ್ಮೊಮ್ಮೆ ಆಕೆ ಆಂಜನೇಯನ ಜೊತೆ ಫ್ರೆಂಡ್ಸ್ ರೀತಿ ಸಂವಹನ ಮಾಡುತ್ತಾಳೆ. ನನಗೆ ಆಗಾಗ ಆಕೆಯ ಮೇಲೂ ಕೋಪ ಬರುತ್ತದೆ” ಎಂದಿದ್ದರು. ಹೀಗೆ ಚಿತ್ರತಂಡದಲ್ಲಿ ನಡೆದ ತಾಂತ್ರಿಕ ಸಮಸ್ಯೆಗೆ ದೇವರನ್ನು ದೂಷಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬಂದಿದೆ.
ಕ್ಷಮೆ ಕೇಳಬೇಕು ಎಂದು ಆಗ್ರಹ
ರಾಜಮೌಳಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಹಲವು ಸಂಘಟನೆಗಳು ಹಾಗೂ ನೂರಾರು ಭಕ್ತರು “ತಕ್ಷಣವೇ ಕ್ಷಮೆ ಕೇಳಬೇಕು” ಎಂದು ಆಗ್ರಹಿಸುತ್ತಿದ್ದಾರೆ. ರಾಜಮೌಳಿ ಈಗ ಏನು ಹೇಳುತ್ತಾರೆ ಎಂಬ ಕುತೂಹಲ ಚಿತ್ರರಂಗದಲ್ಲಿ ಹೆಚ್ಚಿದೆ.
‘ವಾರಣಾಸಿ’ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ
- ಸಿನಿಮಾ 2027ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ.
- ಮುಖ್ಯ ಪಾತ್ರಗಳಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ.
- ಸಂಗೀತ: ಎಂ.ಎಂ. ಕೀರವಾಣಿ
- ಛಾಯಾಗ್ರಹಣ: ಪಿಎಸ್ ವಿನೋದ್
- ಫಸ್ಟ್-ಲುಕ್ ಲಾಂಚ್ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಹಾಗೂ ವಿದೇಶಿ ಮಾಧ್ಯಮಗಳೂ ಭಾಗವಹಿಸಿದ್ದವು.
- 110/130 ಅಡಿ ಉದ್ದದ ಭಾರೀ LED ಪರದೆ, 45 ಜನರೇಟರ್ಗಳು, ಮಣಿಕರ್ಣಿಕಾ ಘಾಟ್ ಪ್ರತಿರೂಪದ ಸೆಟ್ – ಈ ಎಲ್ಲಾ ಅಂಶಗಳು ಕಾರ್ಯಕ್ರಮವನ್ನು ಭವ್ಯಗೊಳಿಸಿವೆ.
ಇದನ್ನು ನೋಡಿ : ಮಾಜಿ ತಹಶೀಲ್ದಾರ್ ಸೈನ್ ಸೀಲ್ ದುರ್ಬಳಕೆ..ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಕಿಡಿ




