CM Siddaramaiah : ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಶ್ವಾಸಕೋಶ ಸಂಬಂಧಿತ ಸಮಸ್ಯೆ ಉಂಟಾಗಿದ್ದು,ಬೆಂಗಳೂರು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ನಿನ್ನೆ ಸಂಜೆ ದಾಖಲಿಸಲಾಗಿದೆ.

CM Siddaramaiah : ರಾಜಕೀಯ ಚರ್ಚೆಗಳ ನಡುವೆ ಕುಟುಂಬ ಆರೋಗ್ಯ ಚಿಂತೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬ್ಯುಸಿಯಾಗಿದ್ದ ಸಿಎಂ ಸಿದ್ದರಾಮಯ್ಯ, ದಿಢೀರ್ ಪತ್ನಿ ಅಸ್ವಸ್ಥರಾಗಿದ್ದ ಸುದ್ದಿ ತಿಳಿದು ರಾತ್ರೋರಾತ್ರಿ ಬೆಂಗಳೂರಿಗೆ ವಾಪಸ್ಸಾದರು.
ಪತ್ನಿ ಪಾರ್ವತಿ ಸಿದ್ದರಾಮಯ್ಯರಿಗೆ ಶ್ವಾಸಕೋಶ ಸಮಸ್ಯೆ
ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಶ್ವಾಸಕೋಶ ಸಂಬಂಧಿತ ಸಮಸ್ಯೆ ಉಂಟಾಗಿದ್ದು,
ಬೆಂಗಳೂರು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ನಿನ್ನೆ ಸಂಜೆ ದಾಖಲಿಸಲಾಗಿದೆ.ವೈದ್ಯರು ಅವರನ್ನು ಐಸಿಯುವಿಗೆ ದಾಖಲಿಸಿ ನಿಗಾದ ಚಿಕಿತ್ಸೆ ನೀಡುತ್ತಿದ್ದಾರೆ.ಪಾರ್ವತಿ ಅವರ ಆರೈಕೆಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಅಲ್ಲೇ ತಂಗಿದ್ದಾರೆ.
ಪತ್ನಿಯ ಆರೋಗ್ಯ ಏರುಪೇರಿನ ಮಾಹಿತಿ ಸಿಎಂಗೆ ದೆಹಲಿಯಲ್ಲೇ ದೊರಕಿತು.ಅವರು ದೂರವಾಣಿ ಮೂಲಕ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಭೆ ಮುಗಿದತೆಯೇ ಸಿದ್ದರಾಮಯ್ಯ ದೆಹಲಿಯಿಂದ ತುರ್ತುವಾಗಿ ಬೆಂಗಳೂರಿಗೆ ವಿಮಾನ ಹತ್ತಿದರು.
ಇದನ್ನು ಓದಿ : ಅತ್ತೆಯಿಂದ ಕಿರುಕುಳ ಆರೋಪ – ಮಗುವಿನೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಅಪೋಲೋ ಆಸ್ಪತ್ರೆಗೆ ನೇರ ಭೇಟಿ – ಆತಂಕಗೊಂಡ ಸಿಎಂ
ಎಚ್ಎಎಲ್ ವಿಮಾನ ನಿಲ್ದಾಣ ತಲುಪಿದ ಸಿಎಂ ಅಲ್ಲಿಂದ ನೇರವಾಗಿ ಅಪೋಲೋ ಆಸ್ಪತ್ರೆಗೆ ತೆರಳಿದರು.ಪತ್ನಿಯ ಆರೋಗ್ಯದ ಬಗ್ಗೆ ಕಳವಳಗೊಂಡು ಆಸ್ಪತ್ರೆಗೆ ಪ್ರವೇಶಿಸಿದ ಸಿದ್ದರಾಮಯ್ಯ ಆತಂಕದ ಭಾವನೆ ಹೊಂದಿದ್ದರು.
ಸಿದ್ಧರಾಮಯ್ಯರಿಗೆ ರಾಜಕೀಯ-ಕುಟುಂಬ ಒತ್ತಡ ಒಂದೇ ವೇಳೆ
ಒಂದೆಡೆ ಸಚಿವ ಸಂಪುಟ ಪುನಾರಚನೆ, ಮತ್ತೊಂದೆಡೆ ನಾಯಕತ್ವ ಬದಲಾವಣೆ ಚರ್ಚೆ—ಈ ಎಲ್ಲಾ ರಾಜಕೀಯ ಒತ್ತಡಗಳ ನಡುವೆ ಪತ್ನಿಯ ಅಸ್ವಸ್ಥತೆ ಸಿಎಂಗೆ ಇನ್ನಷ್ಟು ಚಿಂತೆಯನ್ನು ತಂದಿದೆ.
ಇದನ್ನು ನೋಡಿ : ಪಾವಗಡದಲ್ಲಿ ಹೆಚ್ಚಾಯ್ತು ಕಳ್ಳರ ಅಟ್ಟಹಾಸ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಎಸ್ಕೇಪ್




