Bengaluru Metro : ಬೆಂಗಳೂರು ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ: 13 ನಿಮಿಷಗಳಲ್ಲಿ ರೋಚಕ ರಕ್ಷಣಾ ಕಾರ್ಯಾಚರಣೆ

Bengaluru Metro : BMRCL ಮೂಲಕ ಐದನೇ ಯಶಸ್ವಿ ಅಂಗಾಂಗ ಸಾಗಾಟ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತೊಂದು ಅಪೂರ್ವ ಸಾಧನೆ ಮಾಡಿದೆ.
17 ನವೆಂಬರ್ 2025ರಂದು ಅಸ್ಟರ್ ಆರ್.ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಜೀವಂತ ಹೃದಯವನ್ನು ಕೇವಲ 13 ನಿಮಿಷಗಳಲ್ಲಿ ಸುರಕ್ಷಿತವಾಗಿ ಸಾಗಿಸಲಾಗಿದೆ.
ಇದು ಮೆಟ್ರೋ ಮೂಲಕ ಸಾಗಿಸಲಾದ ಐದನೇ ಜೀವಂತ ಮಾನವ ಅಂಗಾಂಗ.
ಅಂಗಾಂಗ ಸಾಗಾಟಕ್ಕೆ ವಿಶೇಷ ಅನುಮತಿ:
ಈ ಕಾರ್ಯಾಚರಣೆಯನ್ನು 25.05.2025ರ BMRCL ಸಂಯುಕ್ತ ಪ್ರಕ್ರಿಯಾ ಆದೇಶದಂತೆ ನೆರವೇರಿಸಲಾಯಿತು.
ತ್ವರಿತ ರೆಸ್ಪೋನ್ಸ್ ಮತ್ತು ಸಮನ್ವಯದಿಂದ ಮೆಟ್ರೋ ಸಿಬ್ಬಂದಿ ಮತ್ತು ವೈದ್ಯಕೀಯ ತಂಡ ಜೀವ ರಕ್ಷಣೆಗಾಗಿ ಸಮಯದ ವಿರುದ್ಧ ಸ್ಪರ್ಧಿಸಿದರು.
ಸಂಜೆ 7:26ಕ್ಕೆ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ತಂಡ ಆಗಮನ:
ಸಂಜೆ 7:26ಕ್ಕೆ ಆರು ಸದಸ್ಯರ ವೈದ್ಯಕೀಯ ತಂಡವು ಅಂಗಾಂಗ ಪೆಟ್ಟಿಗೆಯೊಂದಿಗೆ ರಾಗಿಗುಡ್ಡ ಮೆಟ್ರೋ ನಿಲ್ದಾಣ ತಲುಪಿತು.
ಸುರಕ್ಷತಾ ಅಧಿಕಾರಿಗಳು ಮತ್ತು ಸ್ಟೇಷನ್ ಸಿಬ್ಬಂದಿ ತಂಡವನ್ನು ಸ್ವಾಗತಿಸಿ ತಕ್ಷಣ ಭದ್ರತಾ ತಪಾಸಣೆ ನಡೆಸಿದರು.
ಪ್ಲಾಟ್ಫಾರ್ಮ್ ಪ್ರವೇಶ
ತಪಾಸಣೆ ನಂತರ ತಂಡವು 7:29ಕ್ಕೆ ಪ್ಲಾಟ್ಫಾರ್ಮ್ ತಲುಪಿತು.ಮೆಟ್ರೋ ಪ್ರಯಾಣವನ್ನು ಯಾವುದೇ ವಿಳಂಬವಿಲ್ಲದೆ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು.
7:32ಕ್ಕೆ ಮೆಟ್ರೋ ಪ್ರಯಾಣ ಆರಂಭ – 7:39ಕ್ಕೆ ಬೊಮ್ಮಸಂದ್ರ ತಲುಪು :
7:32ಕ್ಕೆ ವೈದ್ಯಕೀಯ ತಂಡವು ಮೆಟ್ರೋಗೆ ಹತ್ತಿ, ಸುರಕ್ಷತಾ ಸಿಬ್ಬಂದಿಯ ಸಹಕಾರದೊಂದಿಗೆ ಕೇವಲ 7 ನಿಮಿಷಗಳಲ್ಲಿ 7:39ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿತು.ಅಲ್ಲಿನ ASO ಹಾಗೂ ಸ್ಟೇಷನ್ ಕಂಟ್ರೋಲರ್ ತಂಡವನ್ನು ನಿಲ್ದಾಣದಿಂದ ಹೊರಬರುವವರೆಗೆ ಮಾರ್ಗದರ್ಶನ ಮಾಡಿದರು.
ಆಂಬ್ಯುಲೆನ್ಸ್ ಮೂಲಕ ಅಂತಿಮ ಹಂತ
ನಿಲ್ದಾಣ ತಲುಪುತ್ತಿದ್ದಂತೆಯೇ ಹೃದಯವನ್ನು ತಕ್ಷಣ ಆಂಬ್ಯುಲೆನ್ಸ್ಗೆ ಸ್ಥಳಾಂತರಿಸಲಾಯಿತು.
ಆಂಬ್ಯುಲೆನ್ಸ್ 8:12ಕ್ಕೆ ನಾರಾಯಣ ಹೃದಯಾಲಯವನ್ನು ತಲುಪಿತು.
BMRCL: ಜೀವ ರಕ್ಷಣೆಗೆ ಬದ್ಧತೆ ಮತ್ತೆ ಸಾಬೀತು :
ಈ ಯಶಸ್ವಿ ಕಾರ್ಯಾಚರಣೆ ಮತ್ತೆ ಒಮ್ಮೆ BMRCL ಜೀವನ ರಕ್ಷಣಾ ಕಾರ್ಯಗಳಲ್ಲಿ ತೋರಿಸಿರುವ ಬದ್ಧತೆ, ವೇಗ ಮತ್ತು ಸಮನ್ವಯತೆಯನ್ನು ಜಾಗತಿಕ ಮಟ್ಟದಲ್ಲಿ ಹೊರಹಾಕಿದೆ.
ನಗರ ಸಂಚಾರ ಸೌಲಭ್ಯ ಮಾತ್ರವಲ್ಲದೆ ಜೀವ ಉಳಿಸುವ ಸೇವೆಯಲ್ಲಿಯೂ ಬೆಂಗಳೂರು ಮೆಟ್ರೋ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ.




