Accident : ಚಿಕ್ಕನಾಯಕನಹಳ್ಳಿಯ ಸಾಸಲು ಗೊಲ್ಲರಹಟ್ಟಿ- ಮಾಸ್ತಯ್ಯನಪಾಳ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭಿವಿಸಿದೆ.

Accident : ಚಿಕ್ಕನಾಯಕನಹಳ್ಳಿಯ ಸಾಸಲು ಗೊಲ್ಲರಹಟ್ಟಿ- ಮಾಸ್ತಯ್ಯನಪಾಳ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ
ಇನ್ನು ಮೃತನಾದ ನಿತ್ಯಾನಂದ ಹಿಟಾಚಿ ಯಂತ್ರ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ತನ್ನ ಹಿಟಾಚಿ ಯಂತ್ರವನ್ನು ಪಾವಗಡಕ್ಕೆ ಸ್ಥಳಾಂತರಿಸುವ ಸಲುವಾಗಿ ಭಾನುವಾರ ಸಂಜೆ ಸುಮಾರು 5 ಗಂಟೆಗೆ, ತನ್ನ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಾಸಲು ಗೊಲರಹಟ್ಟಿ–ಮಾಸ್ತಯ್ಯನಪಾಳ್ಯ ರಸ್ತೆ ಭಾಗದಲ್ಲಿ ಸಾಗುತ್ತಿರುವಾಗ, ಎದುರಿನಿಂದ ಬಂದ ಅಪರಿಚಿತ ವಾಹನದ ಅಜಾಗರೂಕತೆಯಿಂದ ನಿತ್ಯಾನಂದನ ಬೈಕ್ ಗೆ ಗುದ್ದಿ ಎಸ್ಕೇಪ್ ಆಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ನಿತ್ಯಾನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ.
ಇದನ್ನು ನೋಡಿ : ಕ್ಯಾಬಿನೇಟ್ ಪುನರ್ ರಚನಗೆ ʼಹೈʼ ಗ್ರೀನ್ ಸಿಗ್ನಲ್ ̲ ಸಿಎಂ ಬದಲಾವಣೆ ಚರ್ಚೆಗೆ ತೆರೆ?!
ಅಧಿಕಾರಿಗಳ ವಿರುದ್ಧ ಆಕ್ರೋಶ
ಇನ್ನು ಗೊಲ್ಲರಹಟ್ಟಿ–ಮಾಸ್ತಯ್ಯನಪಾಳ್ಯ ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದಿದ್ದು ಮುಂದೆ ಯಾವ ಗಾಡಿ ಬರುತ್ತದೆ ಎಂದು ಗೊತ್ತೆ ಆಗುವುದಿಲ್ಲ. ಈ ಗಿಡಗಂಟೆಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೆ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ
ಇನ್ನು ಇದೇ ರಸ್ತೆಯ ಸ್ವಲ್ಪ ದೂರದಲ್ಲಿ ಅಂಬೇಡ್ಕರ್ ವಸತಿ ಶಾಲೆ ಇರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಇಲ್ಲಿ ನಿರಂತರವಾಗಿ ಸಂಚರಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಮತ್ತಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆ ಎಚ್ಚಾಗಿದೆ. ತಕ್ಷಣವೇ ರಸ್ತೆ ಅಕ್ಕಪಕ್ಕ ಇರುವ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ರು
ಇದನ್ನು ಓದಿ : Delhi : ದೆಹಲಿಯ ಕೆಳ ನ್ಯಾಯಾಲಯಗಳು ಹಾಗೂ CRPF ಶಾಲೆಗಳಿಗೆ ಬೆಂಬ್ ಬೆದರಿಕೆ




