Belagavi News : ಭೂತರಾಮನಹಟ್ಟಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ನಸುಕಿನಜಾವ ಮೃತಪಟ್ಟಿದೆ.

ಬೆಳಗಾವಿಯ ಭೂತರಾಮನಹಟ್ಟಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವುಗಳ ಸರಣಿ ಮುಂದುವರಿದಿದ್ದು, ನಸುಕಿನಜಾವ ಮತ್ತೊಂದು ಕೃಷ್ಣಮೃಗ ಮೃತಪಟ್ಟಿದೆ. ಇದರಿಂದ ಇತ್ತೀಚಿನ ಕೆಲವು ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ 31ಕ್ಕೆ ತಲುಪಿದೆ.
ಸತೀಶ್ ಜಾರಕಿಹೊಳಿ ವಿಶೇಷ ಸಭೆ
ಆಕಸ್ಮಿಕ ಸಾವುಗಳು ಆತಂಕ ಮೂಡಿಸಿರುವ ಹಿನ್ನೆಲೆ, ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು. “ಸೋಂಕು ಇತರ ಪ್ರಾಣಿಗಳಿಗೆ ಹರಡದಂತೆ ತಕ್ಷಣ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಸಭೆಯಲ್ಲಿ ಅವರು ಸೂಚಿಸಿದರು.
ಇದನ್ನು ಓದಿ : ಬೆಂಗಳೂರಿಗರೇ ಹುಷಾರ್..ಹುಷಾರ್ – ಖತರ್ನಾಕ್ ಕಳ್ಳರಿದ್ದಾರೆ…!?
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಸ್ಥಳಕ್ಕೆ ಭೇಟಿ
ಈ ನಡುವೆ, ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್. ರಂಗಸ್ವಾಮಿ ಮೃಗಾಲಯಕ್ಕೆ ಆಗಮಿಸಿದ್ದಾರೆ. ಅವರು ಅಧಿಕಾರಿಗಳಿಂದ ಸಾವಿನ ಕಾರಣ, ನಡೆಯುತ್ತಿರುವ ತನಿಖೆ ಮತ್ತು ತಡೆ ಕ್ರಮಗಳ ಕುರಿತು ವಿವರವಾದ ಮಾಹಿತಿ ಸ್ವೀಕರಿಸುತ್ತಿದ್ದಾರೆ.
ಇನ್ನು ಮೃಗಾಲಯದಲ್ಲಿ ಕ್ರಮಬದ್ಧ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬ ಒತ್ತಡ ಹೆಚ್ಚುತ್ತಿದೆ.
ಇದನ್ನು ನೋಡಿ : ರಾಜಣ್ಣಗೆ ಮತ್ತೆ ಸಚಿವ ಸ್ಥಾನ ವಿಚಾರ – ಸಾಸಲು ಸತೀಶ್ ಏನೇಳಿದ್ರು ಗೊತ್ತಾ?




