Suicide : ಪತಿ-ಪತ್ನಿ ಇಬ್ಬರೂ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ದೊಡ್ಡರಾಜ್ ಕ್ಯಾಂಪ್ (Doddaraj Camp) ನಲ್ಲಿ ಕುಟುಂಬ ಕಲಹದಿಂದ ಪ್ರೇರಿತರಾಗಿ ಪತಿ-ಪತ್ನಿ ಇಬ್ಬರೂ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಇದನ್ನು ಓದಿ : Hassan : ಚನ್ನರಾಯಪಟ್ಟಣದಲ್ಲಿ ಸರಣಿ ಅಪಘಾತ – ಓರ್ವ ಸಾವು
ದಂಪತಿ ಆತ್ಮಹತ್ಯೆಗೆ ಶರಣು
ಅಂಬರೀಶ್ (24) ಮತ್ತು ಅವರ ಪತ್ನಿ ಶೃತಿ (20) ಮೃತ ದುರ್ದೈವಿಗಳಾಗಿದ್ದಾರೆ. ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದವರು. ಪ್ರಾಥಮಿಕ ಮಾಹಿತಿ ಪ್ರಕಾರ ದಂಪತಿಯ ನಡುವೆ ಮದುವೆಯ ನಂತರ ಕಲಹ ನಡೆದಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಇದನ್ನು ನೋಡಿ : ಕೆಮಿಕಲ್ ಮಿಶ್ರಿತ ಸಾಂಬರ್ ಸೇವಿಸಿ 8 ಜನ ಅಸ್ವಸ್ಥ. ಮೂವರ ಸ್ಥಿತಿ ಚಿಂತಾಜನಕ




