Tumakuru News : ತುಮಕೂರು ನಗರ ಈಗಾಗಲೇ ಬೆಳೆಯುತ್ತಿರುವ ನಗರ. ಆದ್ರೆ ನಗರದಲ್ಲಿ ಎಷ್ಟರ ಮಟ್ಟಿಗೆ ಸಮಸ್ಯೆಗಳು ತಾಂಡವ ವಾಡ್ತಾ ಇದೆ.

Tumakuru News : ತುಮಕೂರು ನಗರದ ದಿಬ್ಬೂರು ಬಳಿಯ ದೇವರಾಜು ಅರಸು ಯೋಜನೆಯಡಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಸೂರು ಇಲ್ಲದವರಿಗೆ ಮನೆ ಹಂಚಿಕೆ ಮಾಡಲಾಗಿತ್ತು. ಆದ್ರೆ ಈ ಅಪಾರ್ಟ್ಮೆಂಟ್ನಲ್ಲಿ ಒಂದಲ್ಲಾ ಒಂದು ಅವ್ಯವಸ್ಥೆ ತಾಂಡವ ಆಡ್ತಾ ಇದ್ದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ.
ಇದನ್ನು ಓದಿ : Dharwad : ಒಂದೇ ದಿನ ಇಬ್ಬರು ಪೊಲೀಸರು ಸಾವು
ಅನೈತಿಕ ಚಟುವಟಿಕೆಯ ತಾಣವಾದ ಸರ್ಕಾರಿ ಉರ್ದು ಶಾಲೆ
ದೇವರಾಜು ಅರಸು ಬಡಾವಣೆಯ ಮಕ್ಕಳಿಗಾಗಿ ಸರ್ಕಾರಿ ಉರ್ದು ಶಾಲೆಯನ್ನ ತೆರೆಯಲಾಗಿದೆ, ಆದ್ರೆ ಇಂತಹ ಶಾಲೆಯು ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಾಗಿದೆ. ಶಾಲಾ ಆವರಣದಲ್ಲಿರುವ ಆಡಳಿತ ಕಚೇರಿಯಲ್ಲಿ ಪುಂಡರು ಗುಟ್ಕಾ, ಪಾನ್ ಬೀಡಾ ಗಳನ್ನ ಅಗೆದು ಗೋಡೆಗಳ ಮೇಲೆ ಉಗಿದಿದ್ದಾರೆ,
ವಿದ್ಯೆ ಕೊಡುವ ಶಾಲೆಯಲ್ಲಿ ಇದೆಂಥಾ ದುಸ್ಥಿತಿ
ಅಲ್ದೇ ರಾತ್ರಿ ವೇಳೆಯಲ್ಲಿ ಯುವಕರು ಇಲ್ಲಿಯೇ ಕುಡಿದ ಬಾಟಲಿಗಳನ್ನ ಎಸೆಯುತ್ತಾರೆ. ಅಲ್ದೇ ಪಕ್ಕದಲ್ಲೇ ಲೈಬ್ರರಿ ಇದ್ದು ಪಾಳು ಬಿದ್ದ ಕೊಂಪೆಯಂತಾಗಿದ್ದು, ಇದ್ರಲ್ಲೆ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಟ್ಡಡದ ಕಿಟಕಿ ಬಾಗಿಲುಗಳನ್ನ ಪೋಲಿ ಯುವಕರು ಪುಡಿ ಪುಡಿ ಮಾಡಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶಾಲೆಯಲ್ಲಿನ ಅವ್ಯವಸ್ಥೆಯನ್ನ ಸರಿಪಡಿಸಬೇಕಿದೆ.
ಇದನ್ನು ನೋಡಿ : ವೃಕ್ಷ ಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ




