Fire Incident : ಇಂಜಿನ್ ಓವರ್ ಹೀಟ್ ಆಗಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸಮೀಪವಿರುವ ಕನ್ನಡ ಭವನದ ಎದುರು ನಡೆದಿದೆ.

ಕಲಬುರಗಿ ನಗರದಲ್ಲಿ ಇಂಜಿನ್ ಓವರ್ ಹೀಟ್ ಆಗಿ ಚಲಿಸುತ್ತಿದ್ದ ಟಾಟಾ ಸಫಾರಿ ಕಾರು ಬೆಂಕಿಗೆ ಆಹುತಿಯಾದ ಘಟನೆ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿ ಹೊರಬಂದಿದ್ದಾರೆ. ಘಟನೆ ನಗರದಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸಮೀಪ, ಕನ್ನಡ ಭವನದ ಎದುರಿನಲ್ಲಿ ನಡೆದಿದೆ.
ಇದನ್ನು ಓದಿ : IPL 2026 : ತಂಡದ ನಾಯಕ ಯಾರೆಂದು ತಿಳಿಸಿದ CSK
ಇಂಜಿನ್ನಲ್ಲಿ ಸಮಸ್ಯೆ – ಕಾರು ಬೆಂಕಿಗಾಹುತಿ
ಕಲುಬುರಗಿ ನಗರದ ನಿವಾಸಿ ರಾಹುಲ್ ಗುತ್ತೇದಾರ್ ಅವರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಾರಿನ ಎಂಜಿನ್ ಓವರ್ ಹೀಟ್ ಆಗಿದ್ದುದರಿಂದ ಚಾಲಕ ತಕ್ಷಣ ವಾಹನವನ್ನು ನಿಲ್ಲಿಸಿ, ವಾಹನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ
ಅಗ್ನಿಶಾಮಕ ದಳದ ರಮೇಶಕುಮಾರ್, ಹೊನ್ನಪ್ಪ, ಸುಭಾಷ್, ಶಂಕರಲಿಂಗ, ಶಶಿಕುಮಾರ್, ಪ್ರದೀಪ, ಮೌಲಾಸಾಬ್ ಮತ್ತು ಆಶಿಫ್ ಅವರಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನು ನೋಡಿ : ನೀರಿನ ಹೆಜ್ಜೆಪುಸ್ತಕ ಬಿಡುಗಡೆ ವಿಚಾರ ಡಿಕೆಶಿ ವಿರುದ್ಧ ವಿಜಯೇಂದ್ರ ಆಕ್ರೋಶ




