Chikkaballapura News : ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅಪಘಾತ ಪ್ರಕರಣಗಳು ದಿನೇ ಹೆಚ್ಚಾಗುತ್ತಿವೆ. ಅದ್ರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅಪಘಾತ ಪ್ರಕರಣಗಳು ದಿನೇ ಹೆಚ್ಚಾಗುತ್ತಿವೆ. ಅದ್ರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.
ಇತ್ತ ಪೊಲೀಸ್ ಇಲಾಖೆ, ಆರ್ ಟಿಓ ಅಧಿಕಾರಿಗಳು ಕಾರ್ಯಕ್ರಮಗಳನ್ನು ಮಾಡಿ, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಆದ್ರೂ ಅದ್ಯಾಕೋ ಈ ಅಪಘಾತಗಳು ಕಡಿಮೆಯಾಗುತ್ತಿಲ್ಲ.
ಖಾಸಗಿ ಬಸ್ಗಳ ಪರಿಶೀಲನೆ
ಇನ್ನು ಚಿಕ್ಕಬಳ್ಳಾಪುರದಲ್ಲಿ ಕೂಡ ಅಪಘಾತಗಳು ಹೆಚ್ಚಾಗುತ್ತಿದ್ದು, ಕರ್ನೂಲ್ ನಲ್ಲಿ ಆದ ಬಸ್ ದುರಂತದ ನಂತರ ಎಚ್ಚೆತ್ತುಕೊಂಡಿರುವ ಆರ್ಟಿಓ ಅಧಿಕಾರಿಗಳು ಖಾಸಗಿ ಬಸ್ ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿd RTO ಅಧಿಕಾರಿಗಳು
ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಆರ್ ಟಿಓ ಅಧಿಕಾರಿಗಳು ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬಿರುಸಿನ ಕಾರ್ಯಾಚರಣೆ ನಡೆಸಿ, ಖಾಸಗಿ ವಾಹನಗಳ ತಪಾಸಣೆಯನ್ನು ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಚದಲಪುರದಲ್ಲಿ ಖಾಸಗಿ ವಾಹನಗಳನ್ನು ಜಪ್ತಿ ಮಾಡಿದ್ರು.
10 ಕ್ಕೂ ಹೆಚ್ಚು ಓಲ್ವೋ,ಎಸಿ ಸ್ಲೀಪರ್ ಬಸ್ ಗಳನ್ನ ಜಪ್ತಿ ಮಾಡಲಾಯಿತು. ನಾಗಾಲ್ಯಾಂಡ್ . ಅರುಣಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದ ಬಸ್ ಗಳ ಎನ್ನಲಾಗಿದೆ. ರಾಜ್ಯದಲ್ಲಿ ತೆರಿಗೆ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಅಂತರರಾಜ್ಯ ಬಸ್ ಗಳನ್ನು ಜಪ್ತಿ ಮಾಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ
8 ಜನ RTO ಅಧಿಕಾರಿಗಳ ತಂಡ ಕಾರ್ಯಾಚರಣೆ
ಇನ್ನು ಈ ಕಾರ್ಯಾಚರಣೆಯು ಚಿಕ್ಕಬಳ್ಳಾಪುರ ಆರ್ ಟಿ ಓ ಸುಧೀರ್ , ನಾಗರಾಜ್ ಎಸ್ ನಾಯಕ್ ನೇತೃತ್ವದಲ್ಲಿ ನಡೆಯಿತು. 8 ಜನ ಆರ್ ಟಿ ಓ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಪರವಾನಗಿ ಹಾಗೂ ಸೂಕ್ತ ಸೌಲಭ್ಯ ಗಳಿಲ್ಲ ಬಸ್ ಗಳನ್ನು ಸೀಜ್ ಮಾಡಿದರು. ಅಧಿಕಾರಿಗಳು. ಇನ್ನು ಜಪ್ತಿ ಮಾಡಿದ ಬಸ್ ಗಳನ್ನು ನಂದಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ರು.
ಖಾಸಗಿ ಬಸ್ ಸವಾರರು ಫುಲ್ ಶಾಕ್
ಒಟ್ಟಿನಲ್ಲಿ ಚದಲಪುರ ಪ್ರಮುಖ ರಸ್ತೆಯಲ್ಲಿಯೇ ಖಾಸಗಿ ಬಸ್ ಗಳನ್ನು ತಡೆದು ತಪಾಸಣೆಯನ್ನು ಮಾಡಿದ್ರು. ಜೊತೆಗೆ ಆರ್ ಟಿಓ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಖಾಸಗಿ ಬಸ್ ಗಳನ್ನು ಹಿಡಿದು, ತಪಾಸಣೆ ಮಾಡಿ ಸೀಜ್ ಮಾಡಿದ್ರು. ಆರ್ ಟಿಓ ಅಧಿಕಾರಿಗಳ ದಿಢೀರ್ ಪರಿಶೀಲನೆಗೆ ಖಾಸಗಿ ಬಸ್ ಸವಾರರು ಫುಲ್ ಶಾಕ್ ಆದ್ರು




